ಯಲಹಂಕ: ಈ CC TVಲಿ ಸಭ್ಯನ ರೀತಿ ಪೋಸ್ ಕೊಟ್ಟು ಹೋಗ್ತಿರೋ ಆಸಾಮಿ ಹೆಸರು ಅಕ್ಬರ್ ಅಂತ. ವಯಸ್ಸು 36 ವರ್ಷ, ಕಸುಬು ಮನೆ ಕಳವು ಮಾಡುವುದು.
ಮೂಲತಃ ಉತ್ತರ ಪ್ರದೇಶದವನಾದ ಈತನ ತಂದೆ-ತಾಯಿ ಇಬ್ಬರು ಪ್ರೊಫೆಷನಲ್ಲಾಗಿ ಖತರ್ನಾಕ್ ಕಳ್ಳರು! ಇಡೀ ಕುಟುಂಬ ಕಳ್ಳತನದಿಂದ ಬಂದ ಸಂಪಾದನೆಯಿಂದ ಬದುಕುತ್ತಿತ್ತು. ಆದರೆ, ವಯಸ್ಸಾದ ತಂದೆ- ತಾಯಿ ಇಬ್ಬರು ಸಾವನ್ನಪ್ಪಿದ್ದಾರೆ.
2004ರಿಂದ ಉತ್ತರಪ್ರದೇಶದ ಈ ಮನೆಗಳ್ಳ ಮುಂಬಯಿ, ದೆಹಲಿಯಲ್ಲಿ ವಾಸವಾಗಿದ್ದ. ಐದನೇ ತರಗತಿ ಓದಿಕೊಂಡಿದ್ದ ಈತ ಬಾಡಿಗೆ ಆಟೋ ಓಡಿಸಿಕೊಂಡಿದ್ದ. ಮುಂದೆ ಕಳ್ಳತನವನ್ನೇ ವೃತ್ತಿಮಾಡಿಕೊಂಡ ಈತ ಅನೇಕ ಸಲ ಜೈಲಿಗೂ ಹೋಗಿ ಬಂದಿದ್ದಾನೆ. ಈ ಪ್ರಕರಣದಲ್ಲಿ ಅಕ್ಬರ್ ಗೆ ಉತ್ತರಪ್ರದೇಶದ ಶಾದಬ್ ಖಾನ್ ಸಾಥ್ ನೀಡುತ್ತಿದ್ದ. ಇದೀಗ ಇಬ್ಬರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಯಲಹಂಕ ಉಪನಗರ ವ್ಯಾಪ್ತಿ A-Sector ನ ಮನೆ ಬಾಗಿಲು ಮುರಿದು ಫೆಬ್ರವರಿ 13-2022ರಂದು ಮನೆಗಳವು ಮಾಡಿ 400 ಗ್ರಾಂ ಚಿನ್ನಾಭರಣ & ಎರಡು ಲಕ್ಷ ನಗದಿನೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಮನೆ ಮಾಲೀಕರ ದೂರಿನನ್ವಯ ಯಲಹಂಕ ಉಪನಗರ ಪೊಲೀಸರು ಕಾರ್ಯಾಚರಣೆ ನಡೆಸಿ 27-03-2022ರಂದು ದೆಹಲಿಯಲ್ಲಿ ಬಂಧಿಸಿ ಕರೆತಂದಿದ್ದಾರೆ.
ಈತನ ಬಂಧನದಿಂದ ದೆಹಲಿ, ಬಾಂಬೆ & ಬೆಂಗಳೂರಿನ 10ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿ, 7.2ಲಕ್ಷ ಬೆಲೆಯ 180 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಯಲಹಂಕ ACP ಮನೋಕ್ ಕುಮಾರ್ ನೇತೃತ್ವದಲ್ಲಿ ಯಲಹಂಕ ಉಪನಗರ ಇನ್ಸ್ಪೆಕ್ಟರ್ ಆನಂದ್ ನಾಯಕ್ & PSI ಲೋಕರೆಡ್ಡಿ & ಉಪನಗರ ಸಿಬ್ಬಂದಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ವಶಪಡಿಸಿಕೊಂಡ ಮಾಲನ್ನು ಉಪನಗರ ಪೊಲೀಸರು ಮಾಲೀಕರಿಗೆ ಒಪ್ಪಿಸಿದ್ದಾರೆ.
PublicNext
19/04/2022 08:26 am