ನೆಲಮಂಗಲ: ಬೆಂಗಳೂರು ಉತ್ತರ ತಾಲೂಕು ಸೊಂಡೆಕೊಪ್ಪದಲ್ಲಿರೋ ಎಫ್ ಡಿಸಿ (ಫಾರಿನರ್ಸ್ ಡಿಟೆಂಷನ್ ಸೆಂಟರ್) ಅಂದ್ರೆ ವಿದೇಶಿಗರ ಪುನರ್ವಸತಿ ಕೇಂದ್ರದಲ್ಲಿ ಪುಂಡಾಟಿಕೆ ಮಾಡುತ್ತಿದ್ದ ಮೂವರು ವಿದೇಶಿ ನೈಜೀರಿಯನ್ ಪ್ರಜೆಗಳನ್ನ ಮಾದನಾಯಕನಹಳ್ಳಿ ಠಾಣಾ ಪೊಲೀಸ್ರು ಜೈಲಿಗಟ್ಟಿದ ಘಟನೆ ನೆಡೆದಿದೆ.
ಇನ್ನೂ ವೀಸಾ ಅವಧಿ ಮುಗಿದ ವಿದೇಶಿಗರ ಪುನರ್ವಸತಿ ಕೇಂದ್ರದಲ್ಲಿದ್ದ ನೈಜೀರಿಯಾ ಮೂಲದ ಚಿನ್ವೀಬಾ ಚುಕ್ವಜೆಕ್ಯೋ ಆ್ಯಂಟನಿ, ಇಜೆಮಾ ಒಸೇಜಿ ಒಗ್ವೋ & ಚಿಸಂ ಒಕ್ಪುಸಾ ಜೆರೋಮಿಯಾ ಎಂಬುವರ ಪುಂಡಾಟಿಕೆಗೆ ಬಂಧಿಸಿ ಜೈಲಿಗಟ್ಟಲಾಗಿದೆ.
ಕೇಂದ್ರದ ಅಡುಗೆ ಮನೆ, ಅಧಿಕಾರಿಗಳ ಕಛೇರಿ, ಶೌಚಗೃಹಕ್ಕೆ ಬೀಗ ಹಾಕುವುದು, ಅಡುಗೆ ಸಹಾಯಕ ಮಹಿಳಾ ಸಿಬ್ಬಂದಿಗಳ ಮುಂದೆ ಅರೆನಗ್ನ ಸ್ಥಿತಿಯಲ್ಲಿ ನಿಂತು ಅಸಭ್ಯ ವರ್ತನೆ ತೋರೋದು, ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಳ್ಳಲು ಇತರರನ್ನ ಪ್ರೇರೇಪಿಸುವುದು, ಪೊಲೀಸ್ ಸಿಬ್ಬಂದಿಗಳ ಮೇಲೆಗೆ ಹಲ್ಲೆಗೆ ಯತ್ನಿಸುತ್ತಿದ್ದರು. ಪುಂಡಾಟಿಕೆ ನಿಲ್ಲಿಸುವಂತೆ ಪೊಲೀಸ್ ಹಿರಿಯ ಅಧಿಕಾರಿ ಸೂಚಿಸಿದ್ರು ಕ್ಯಾರೆ ಎನ್ನದ ನೈಜಿರಿಯನ್ ಗಳು
ಅಂದರ್ ಆಗಿದ್ದಾರೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮೂವರನ್ನ ಜೈಲಿಗಟ್ಟಲಾಗಿದೆ.
PublicNext
09/04/2022 11:56 am