ಬೆಂಗಳೂರು: ವಕೀಲ ಜಗದೀಶ್ ಮತ್ತೆ ಕಮಿಷನರ್ ಕಚೇರಿಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.
ಕಮೀಷನರ್ ಕಚೇರಿಗೆ ದೂರು ನೀಡಲು ಬಂದಿದ್ದ ವೇಳೆ ಎಎಸ್ಐ ಮತ್ತು ಜಗದೀಶ್ ನಡುವೆ ವಾಕ್ಸಮರ ಉಂಟಾಗಿದೆ. ಅಧಿಕಾರಿಗಳು ಬರ್ತಿದ್ದಾರೆ ಸೈಡ್‌ಗೆ ಹೋಗಿ ಎಂದಿದಕ್ಕೆ ಎಎಸ್ಐ ಮತ್ತು ವಕೀಲ ಜಗದೀಶ್ ನಡುವೆ ಮಾತಿನ ಚಕಮಕಿ ನಡೆದಿದೆ.
ಡಿಸಿಪಿ ಏನ್ ಸಿಎಂ ಅಲ್ವಲ್ಲ ಎಂದು ಎಎಸ್ಐ ಮೇಲೆ ಜಗದೀಶ್ ಹೌಹಾರಿದಾಗ ಕಚೇರಿ ಸಿಬ್ಬಂದಿ ಮಧ್ಯ ಪ್ರವೇಶಿಸಿ ತಿಳಿಗೊಳಿಸಿದ್ದಾರೆ. ಹಲಾಲ್ ಪರ ಪ್ರಚಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಲು ಬಂದ ವೇಳೆ ಘಟನೆ ನಡೆದಿದೆ. ಹಿರಿಯ ವಕೀಲರಾದ ಬಾಲನ್, ಎ.ಪಿ. ರಂಗನಾಥ್ ನಿಯೋಗದೊಂದಿಗೆ ವಕೀಲ ಜಗದೀಶ್ ಕೂಡ ಬಂದಿದ್ರು.
PublicNext
01/04/2022 04:41 pm