ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಂಗಿನಕಾಯಿ ಕೀಳಲು ಬಂದು ವೃದ್ಧೆಯ ಸರ ಕಿತ್ತು ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ತೆಂಗಿನಕಾಯಿ ಕೀಳುವ ಸೋಗಿನಲ್ಲಿ ವೃದ್ಧೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಸರಗಳ್ಳತನ ಮಾಡಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಕೃಷ್ಣಗಿರಿ ಮೂಲದ ಸಭಾಪತಿ ಬಂಧಿತ‌ ಆರೋಪಿಯಾಗಿದ್ದು ಈತನಿಂದ 60 ಗ್ರಾಂ ಮೌಲ್ಯದ ಚಿನ್ನದ ಸರವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದ. ಗಾರೆಗೆಲಸ, ತೆಂಗಿನಕಾಯಿ‌ ಕೀಳುವುದು ಸೇರಿದಂತೆ ಇನ್ನಿತರ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಲ್ಲೇಶ್ವರ ನಿವಾಸಿಯಾಗಿರುವ ವೃದ್ಧೆ ನಳಿನಾ ನಾಗರಾಜ್‌ಗೆ ಆರೋಪಿಯ ಪರಿಚಯವಾಗಿತ್ತು. ಮೂರು ತಿಂಗಳ ಹಿಂದೆ ವೃದ್ಧೆಯ ಮನೆಯ ಆವರಣದಲ್ಲಿ ತೆಂಗಿನ ಕಾಯಿ ಕಿತ್ತುಕೊಟ್ಟಿದ್ದ.

ಈ ಮೂಲಕ‌ ಅಜ್ಜಿ ವಿಶ್ವಾಸ ಸಂಪಾದಿಸಿದ್ದ ಆರೋಪಿ ಇದೇ ನಂಬಿಕೆ ಮೇರೆಗೆ ಮಾರ್ಚ್ 7ರಂದು ತೆಂಗಿನಕಾಯಿ ಕೀಳುವುದಕ್ಕೆ ವೃದ್ಧೆ ಕರೆದಿದ್ದರು.‌ ಮನೆಗೆ ಬಂದ ಆರೋಪಿಯು ಮನೆಯಲ್ಲಿ ವೃದ್ಧೆ ಹೊರತುಪಡಿಸಿ ಯಾರು ಇಲ್ಲದಿರುವುದನ್ನು ಗಮನಿಸಿ ಕೈಯಲ್ಲಿದ್ದ ತೆಂಗಿನ ಕಾಯಿ ಕತ್ತರಿಸುವ ಮಚ್ಚಿನಿಂದ ವೃದ್ದೆಯ ಕತ್ತಿನ ಭಾಗದ ಮೇಲೆ ಹಲ್ಲೆ‌ ನಡೆಸಿ 60 ಗ್ರಾಂ ಚಿನ್ನದ ಸರವನ್ನ ಎಗರಿಸಿ ಪರಾರಿಯಾಗಿದ್ದ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ವೃದ್ದೆಯ ಮನೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರಂ ಇನ್‌ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಸಿಸಿಟಿವಿ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

Edited By :
Kshetra Samachara

Kshetra Samachara

29/03/2022 05:01 pm

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ