ದಾಸರಹಳ್ಳಿ: ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಬರ್ಬರ ಕೊಲೆ ಪ್ರಕರಣವನ್ನು ರಾಜಗೋಪಾಲನಗರ ಪೊಲೀಸರು ಭೇದಿಸಿದ್ದಾರೆ. ಇನ್ಸ್ ಪೆಕ್ಟರ್ ಜಗದೀಶ್ ಅಂಡ್ ಟೀಂ ಕೊನೆಗೂ ಸೈಕೋ ಕಿಲ್ಲರ್ ಪ್ರಶಾಂತನನ್ನ ಬಂಧಿಸಿದ್ದಾರೆ. ಮಾರ್ಚ್ 15 ರಂದು ತಡರಾತ್ರಿ ಹೆಗ್ಗನಹಳ್ಳಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೃಷ್ಣಪ್ಪನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆರೋಪಿ ಪ್ರಶಾಂತ್ ಕೊಲೆಗೈದಿದ್ದ. ನಂತರ ಕೊಲೆಯಾದ ಕೃಷ್ಣಪ್ಪನ ಜೇಬಿನಿಂದ 500 ರೂ ತೆಗೆದುಕೊಂಡು ಪರಾರಿಯಾಗಿದ್ದ. ಸಿಸಿಟಿವಿ ಆಧರಿಸಿ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ಬಳಿಕ ರಾಜಗೋಪಾಲನಗರದಿಂದ ಕೆ.ಆರ್ ಮಾರ್ಕೆಟ್ ವರೆಗೂ ಆರೋಪಿ ಪ್ರಶಾಂತ ನಡೆದುಕೊಂಡೇ ಹೋಗಿದ್ದ. ಈತ ಬಸ್ ಕ್ಲೀನರ್ ಆಗಿ ಕೆಲಸ ಮಾಡ್ತಿದ್ದ. ಸದ್ಯ ಪೊಲೀಸರು ಸೈಕೋ ಪ್ರಶಾಂತ್ ನನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
PublicNext
23/03/2022 02:01 pm