ಆನೇಕಲ್: ದಾಯಾದಿಗಳ ಕಲಹದಲ್ಲಿ ತಮ್ಮನಿಗೆ ಅಣ್ಣ ಕೈಮೂಳೆ ಮುರಿಯುವ ಹಾಗೆ ಹೊಡೆದ್ರು ಜಿಗಣಿ ಪೊಲೀಸ್ರು ಕೇಸ್ ತಗೋತಿಲ್ವಂತೆ. ಹೀಗಂತ ಗಾಯಾಳು ಅಮರನಾಥ ರೆಡ್ಡಿ ಎಸ್ಪಿ ಮತ್ತು ಐಜಿಗೆ ದೂರು ನೀಡಿದ್ದಾರೆ. ಜಿಗಣಿ ನಿವಾಸಿಯಾಗಿರೋ ಅಮರನಾಥ್ ರೆಡ್ಡಿಗೆ ಆತನ ಸೋದರ ಮಂಜುನಾಥ್ ರೆಡ್ಡಿ ಜೊತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಗಲಾಟೆಯಲ್ಲಿ ಮಂಜುನಾಥ್ ಮದ್ಯದ ಬಾಟೆಲ್ ನಿಂದ ಹಲ್ಲೆ ನಡೆಸಿ ಕೈ ಮುರಿದಿದ್ದಾನೆ ಎಂದು ಅಮರನಾಥ್ ಆರೋಪಿಸಿದ್ದಾನೆ. ಇದಕ್ಕೆ ಪೂರಕವಾಗಿ ಎಂಎಲ್ ಸಿ ರಿಪೋರ್ಟ್ ಹಾಗೂ ಎಕ್ಸ್ ರೇ ರಿಪೋರ್ಟ್ ನೀಡಿ ಜಿಗಣಿ ಠಾಣೆಗೆ ದೂರು ನೀಡಿದ್ರು ಪೊಲೀಸರು ದಾಯದಿ ಜಗಳ ಎಂದು ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಗಾಯಾಳು ಅಮರನಾಥ್ ನ್ಯಾಯಕ್ಕಾಗಿ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ. ಸದ್ಯ ಅಮರನಾಥ್ ಮನವಿಗೆ ಸ್ಪಂದಿಸಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಗಣಿ ಪೊಲೀಸ್ರಿಗೆ ಸೂಚಿಸಿದ್ದಾರೆ.
PublicNext
18/03/2022 04:09 pm