ಯಲಹಂಕ: ಬೆಂಗಳೂರು ಈಶಾನ್ಯ ವಿಭಾಗದ ಯಲಹಂಕ ಪೊಲೀಸರಿಂದ ನಾಲ್ಕು ಜನ ಡ್ರಗ್ ಪೆಡ್ಲರ್ ಮತ್ತು ಅಕ್ರಮವಾಗಿ ಇಬ್ಬರು ಆಫ್ರಿಕಾ ಮೂಲದವರು ಸೇರಿ ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿದೆ.
ಆಫ್ರಿಕಾ ಮೂಲದ ಉಡೇ ಉಡೇ ಊಜಾ, ಎಕೆಚುಕ್ವು ಡೇನಿಯಲ್ ಆಫ್ರಿಕಾ ಮೂಲದವರಾದರೆ ತಸ್ಲಿಂ, ಮೊಹಮ್ಮದ್ ಉಮರ್ ಮುಕ್ತಿಯಾರ್ ಬೆಂಗಳೂರು ಮೂಲದವರು ಎನ್ನಲಾಗ್ತಿದೆ. ಇವರಲ್ಲಿ ಒಬ್ಬ ಮಾಧಕ ವ್ಯಸನಿಯಾಗಿದ್ದ. ಬಂಧಿತರಿಂದ 105 ಗ್ರಾಂ MDMA ಡ್ರಗ್ಸ್ ನ ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳು ವಿದ್ಯಾರ್ಥಿಗಳು ಮತ್ತು ಬ್ಯುಸಿನೆಸ್ ಮ್ಯಾಗ್ನೆಟ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್‌ನ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಇದರ ಮಾಹಿತಿ ಮೇರೆಗೆ ಯಲಹಂಕ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಇದೀಗ ನಾಲ್ಕು ಜನರನ್ನು ವಶಕ್ಕೆ ಪಡೆದಿರುವ ಯಲಹಂಕ ಪೊಲೀಸರು, ಈ ಡ್ರಗ್ಸ್ ಜಾಲದ ಹಿನ್ನೆಲೆ ಬಗ್ಗೆ ಮತ್ತಷ್ಟು ತನಿಖೆಗೆ ಮುಂದಾಗಿದ್ದಾರೆ.
Kshetra Samachara
06/03/2022 10:33 am