ಬೆಂಗಳೂರು: ವಾರಾಂತ್ಯದ ಭರ್ಜರಿ ವ್ಯಾಪಾರಕ್ಕೆ ತಯಾರಾಗಿದ್ದ ಡ್ರಗ್ ಪೆಡ್ಲರ್‌ಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಶಾಕ್ ನೀಡಿದೆ. ವೀಕ್ ಎಂಡ್‌ನಲ್ಲಿ ಸೇಲ್ ಆಗಬೇಕಿದ್ದ ಐವತ್ತು ಲಕ್ಷ ಮೌಲ್ಯದ ನಿಷೇಧಿತ ಡ್ರಗ್‌ನ ಎಸಿಪಿ ರಾಮಚಂದ್ರ ನೇತೃತ್ವದ ತಂಡ ಸೀಜ್ ಮಾಡಿದ್ದಾರೆ.
ನೈಜೀರಿಯಾ ಮೂಲದ ಜಾನ್, ಓಬಿನ್ನ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಅರ್ಧ ಕೋಟಿ ಡ್ರಗ್ ಪತ್ತೆ ಮಾಡಿದ್ದಾರೆ. 183ಗ್ರಾಂ ತೂಕದ 400ಎಂಡಿಎಂಎ ಎಕ್ಸಟಸಿ ಪಿಲ್ ಮತ್ತು 62ಗ್ರಾಂ ಎಂಡಿಎಂಎ ಕ್ರಿಸ್ಟಲ್ ಪತ್ತೆಯಾಗಿದ್ದು, ಕಾಲೇಜು ವಿಧ್ಯಾರ್ಥಿಗಳು ಹಾಗೂ ಹೈ ಫೈ ಆಸಾಮಿಗಳಿಗೆ ಈ ಡ್ರಗ್ ಸಪ್ಲೈ ಮಾಡ್ತಿದ್ದ ವಿದೇಶಿ ಪ್ರಜೆಗಳು, ಡ್ರಗ್ ಸಪ್ಲೈಗೆ ಪುಲಕೇಶಿನಗರದ ರೂಮ್ ಮಾಡಿದ್ರು. ಡ್ರಗ್ ಮಾರಾಟ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿ ಆರೋಪಿಗಳನ್ನ ಹೆಡೆಮುರಿಕಟ್ಟಿದ್ದಾರೆ. ಇನ್ನು ನೈಜೀರಿಯಾದಿಂದ ಸ್ಟೂಡೆಂಟ್ ವೀಸಾ ಮೇಲೆ ನಗರಕ್ಕೆ ಬಂದು ವಿದೇಶದಿಂದ ಬರುವ ಸಹಪಾಠಿಗಳ ಮೂಲಕ ಡ್ರಗ್ ತರಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
PublicNext
05/03/2022 04:27 pm