ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಬಹುತೇಕ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದ್ದು, ಚಿಲ್ಲರೆ ಅಂಗಡಿಗಳಿಗೆ ಮದ್ಯ ಸರಬರಾಜು ಮಾಡುವ ವ್ಯಕ್ತಿಯನ್ನ ಗ್ರಾಮದ ಯುವಕರ ತಂಡ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ನಡೆದಿದೆ.
ಹಗಲು ರಾತ್ರಿ ಎನ್ನದೇ ಹೋಬಳಿಯ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಖುಲ್ಲಂ ಖುಲ್ಲಾ ನಡೆಯುತ್ತಿದೆ, ಮದ್ಯ ವ್ಯಸನಕ್ಕೆ ಬಿದ್ದಿರೋ ಯುವಕರು ಬೆಳಿಗ್ಗೆಯೇ ಮತ್ತೇರಿಸಿಕೊಂಡು ಕೆಲಸಗಳಿಗೆ ಹೋಗದೇ ಕುಡಿಯೋದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದಾರೆ. ಯುವಕರಿಗೆ ಹಳ್ಳಿಗಳಲ್ಲಿ ಮದ್ಯ ಸಿಗೋದ್ರಿಂದ ಇಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಅನ್ನೋದು ಯುವಕರ ಅಪವಾದ.
ಇದಕ್ಕೆ ಸಾಕ್ಷಿ ಎಂಬಂತೆ ಬಾರ್ ನಿಂದ ಭಾರೀ ಪ್ರಮಾಣದಲ್ಲಿ ಅಂಗಡಿಗಳಿಗೆ ಮದ್ಯ ತಲುಪಿಸಲು ಬಂದಿದ್ದಾತ ಗ್ರಾಮದ ಯುವಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಕ್ರಮವಾಗಿ ಮದ್ಯ ತಂದು ಹಳ್ಳಿಜನರನ್ನು ಏಕೆ ಹಾಳು ಮಾಡ್ತೀರಾ ಅಂತಾ ಗಟ್ಟಿಯಾಗಿಯೇ ಯುವಕರು ಪ್ರಶ್ನಿಸಿದ್ದಾರೆ. ಇದಕ್ಕೆ ಧಮ್ಕಿ ಹಾಕಿದ ಅತ ಇದನ್ನು ಪ್ರಶ್ನಿಸೋ ಅಧಿಕಾರ ನಿಮಗಿಲ್ಲ ಅಂತಾನೆ, ಈ ಜಟಾಪಟಿಯ ವಿಡಿಯೋ ಇದೀಗ ವೈರಲ್ ಆಗಿದೆ. ಘಟನೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
Kshetra Samachara
05/03/2022 01:10 pm