ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲಾರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಲಾರಿ ಚಾಲಕ ಮತ್ತು‌ ಕ್ಲೀನರ್‌ ನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ

ಬೆಂಗಳೂರು: ನೆಲಮಂಗಲ ತಾಲ್ಲೂಕು ಶ್ರೀನಿವಾಸಪುರ ಬಳಿ ಗಾಂಜಾ ಮಾರಾಟದ ಖಚಿತ ಮಾಹಿತಿ ಪಡೆದ ನೆಲಮಂಗಲ ಅಬಕಾರಿ ಇಲಾಖೆ ಎಸ್ಐ ಶ್ರೀನಿವಾಸ ಮೂರ್ತಿ ಮತ್ತು ಸಿಬ್ಬಂದಿಗಳು ಲಾರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದು ಧೃಡ ಪಡುತ್ತಿದ್ದಂತೆ ದಾಳಿ ನೆಡೆಸಿ ಉತ್ತರ ಪ್ರದೇಶ ಮೂಲದ ಅಜಿತ್ ಕುಮಾರ್ 25 ಚಾಲಕ, ಜಿತೀಂದರ್ 30 ಕ್ಲೀನರ್ನನ್ನು ಬಂಧಿಸಿದ್ದು, ಆರೋಪಿಗಳ ಬಳಿ ಇದ್ದ 100 ಗ್ರಾಂ ಗಾಂಜಾ, ಮತ್ತು 10 ಚಕ್ರದ ಕಂಟೇನರ್ ವಾಹನವನ್ನ ವಶ ಪಡಿಸಿಕೊಳ್ಳಲಾಗಿದೆ.

ಈ ಸಂಬಂಧ NDPS ಕಾಯ್ದೆ ಅಡಿ ನೆಲಮಂಗಲ ಅಬಕಾರಿ ಉಪ ನಿರೀಕ್ಷಕರ ಕಛೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : Manjunath H D
Kshetra Samachara

Kshetra Samachara

04/03/2022 04:46 pm

Cinque Terre

2.1 K

Cinque Terre

0

ಸಂಬಂಧಿತ ಸುದ್ದಿ