ನೆಲಮಂಗಲ: ವ್ಯವಸಾಯ ಅಂತ ಮಾಡ್ಕೊಂಡಿದ್ದ ಆಸಾಮಿಯೋರ್ವ ಊರು ಬಿಟ್ಟು ತನ್ನ ಮೋಜುಮಸ್ತಿಯ ಜೀವನಕ್ಕಾಗಿ ಬೈಕ್ ಎಗರಿಸುವ ಕೆಲಸಕ್ಕೆ ಕೈಹಾಕಿ, ಅಂತರ ಜಿಲ್ಲಾ ಮಟ್ಟದ ಕಳ್ಳನಾಗಿ ಈಗ ಸದ್ಯ ಪೊಲೀಸರ ಅತಿಥಿಯಾದ ಘಟನೆ ಬೆಂ.ಗ್ರಾ. ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯ ದೊಡ್ಡತರಹಳ್ಳಿ ಮೂಲದ ಸುನಿಲ್ @ ಸುನಿ 29 ಬಂಧಿತ ಆರೋಪಿಯಾಗಿದ್ದು, ನೆಲಮಂಗಲ, ಮಾದನಾಯಕನಹಳ್ಳಿ, ಪೀಣ್ಯ ಹಾಸನ ಮತ್ತು ಮೈಸೂರು ಸರಹದ್ದಿನಲ್ಲಿ ಬೈಕ್ ಕಳ್ಳತನ ಪ್ರಕರಣದ ರುವಾರಿ ಸುನಿಲ್ ಎಗರಿಸಿದ ಸುಮಾರು 11 ಬೈಕ್‌ಗಳನ್ನ ಜಪ್ತಿ ಮಾಡಿದ ನೆಲಮಂಗಲ ಟೌನ್ ಪೊಲೀಸ್ರು, ಸದ್ಯ ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿ ಸುನಿಲ್‌ನನ್ನ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.
PublicNext
02/03/2022 08:35 am