ಆನೇಕಲ್ :ಆಸ್ತಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಜನ್ಮ ಕೊಟ್ಟ ತಂದೆಯನ್ನು ಮಗ ಮತ್ತು ಪತ್ನಿ ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಪಣ್ಣೇನಹಳ್ಳಿ ಯಲ್ಲಿ ನಡೆದಿದೆ.
ತುಮಕೂರು ಮೂಲದ ಚೆನ್ನಿಗರಾಯಪ್ಪ ಕೊಲೆಯಾದ ದುರ್ದೈವಿ. ಗಂಡನನ್ನು ಪತ್ನಿ ಶೋಭಾ ಮಗನ ಜೊತೆ ಸೇರಿ ಹತ್ಯೆಗೈದಿದ್ದಾರೆ.
ಚೆನ್ನಿಗರಾಯಪ್ಪ ಶೋಭಾ ಎನ್ನುವವರನ್ನು ಮದುವೆಯಾಗಿದ್ದರು. ಆದರೆ ಅವರನ್ನು ಬಿಟ್ಟು ಎರಡನೇ ಮದುವೆ ಮಾಡಿಕೊಂಡಿದ್ದರು. ಈ ವಿಚಾರಕ್ಕೆ ಆಗಾಗ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಅಲ್ಲದೇ 21 ಗುಂಟೆ ಜಮೀನನ್ನು ಪತ್ನಿ ಶೋಭಾ, ಮಗನಾದ ನಿಖಿಲ್ ಹೆಸರಿಗೆ ಬರೆದುಕೊಡುವಂತೆ ಕೇಳುತ್ತಿದ್ದಳು. ಜಮೀನು ಬರೆದುಕೊಡಲು ನಿರಾಕರಿಸಿದಾಗ ನಿಖಿಲ್ ಮತ್ತು ಸ್ನೇಹಿತೆಯ ಮಕ್ಕಳಾದ ಗುರುಕಿರಣ್ ವಿಶ್ವಾಸ್ ಮಂಜುನಾಥ್ ಎಂಬುವವರ ಜೊತೆಗೂಡಿ ಚೆನ್ನಿಗರಾಯಪ್ಪ ನನ್ನ ಕಿಡ್ನಾಪ್ ಮಾಡಿಕೊಲೆ ಮಾಡಿದ್ದಾರೆ.
ಡಿಸೆಂಬರ್ 21 ತಾರೀಖಿನಂದು ತುಮಕೂರು ಜಿಲ್ಲೆಯ ತೊಂಡೆಗೆರೆಯಿಂದ ಕಿಡ್ನಾಪ್ ಮಾಡಿದ ಬಳಿಕ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಪಣ್ಣೇನಹಳ್ಳಿ ಜಾಗದಲ್ಲಿ ತಂದು ನಿಖಾಲ್ ಅಂಡ್ ಗ್ಯಾಂಗ್ 22 ಬಾರಿ ತಿವಿದು ಹತ್ಯೆಗೈದು ಯಾರಿಗೂ ಗುರುತು ಸಿಗದ ಹಾಗೆ ಪೆಟ್ರೋಲ್ ಸುರಿದು ಶವವನ್ನ ಸುಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ , ಶೋಭಾ, ನಿಖಿಲ್, ವಿಶ್ವಾಸ್ ಮಂಜುನಾಥ್ ಸೇರಿದಂತೆ ಬನ್ನೇರುಘಟ್ಟ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
PublicNext
04/02/2022 07:25 pm