ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಡಹಗಲೇ ಮನೆಗಳ್ಳತನ : ಚಿನ್ನಾಭರಣ ಮತ್ತು ನಗದು ಕದ್ದು ಪರಾರಿ

ನೆಲಮಂಗಲ: ಮನೆ ಬಾಗಿಲ ಬೀಗ ಮುರಿದ ಕಳ್ಳರು ಹಾಡಹಗಲೇ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ನೆಲಮಂಗಲ ನಗರ, ಬಿನ್ನಮಂಗಲ ಸಮೀಪದ ವಿನಾಯಕನಗರದಲ್ಲಿ ನಡೆದಿದೆ. ಜಗನ್ನಾಥ್ ಎಂಬುವರ ಮನೆಗೆ ಬಂದ ಕಳ್ಳರು ಮನೆ ಬೀರುವಿನಲ್ಲಿದ್ದ 80 ಸಾವಿರ ನಗದು, ಸುಮಾರು 4.5 ಲಕ್ಷಕ್ಕೂ ಹೆಚ್ಚು ಮೌಲ್ಯದ 100 ಗ್ರಾಂ ನಷ್ಟು ಚಿನ್ನ, ಬೆಳ್ಳಿ ಸಾಮಗ್ರಿಗಳನ್ನು ಎಗರಿಸಿದ್ದಾರೆ.

ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nagesh Gaonkar
PublicNext

PublicNext

27/01/2022 09:49 pm

Cinque Terre

35.61 K

Cinque Terre

1

ಸಂಬಂಧಿತ ಸುದ್ದಿ