ಬೆಂಗಳೂರು: ಗಾಂಜಾ ದಂಧೆಯಲ್ಲಿ ಇಬ್ಬರು ಕಾನ್‌ಸ್ಟೇಬಲ್ ಬಂಧನ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಸದ್ಯ ತನಿಖೆ ಮುಂದುವರೆಸಿ ಒಡಿಶಾ ಮೂಲದ ಪೂಜಾ, ತಮಿಳುನಾಡಿನ ಸೋಮಸುಂದರಂ ಹಾಗೂ ನಾಗಪುರದ ಶಿವ ಪಾಟೀಲ್ ಎಂಬಾತರನ್ನು ಬಂಧಿಸಲಾಗಿದೆ. ಸದ್ಯ ಒಟ್ಟಾರೆ ಪ್ರಕರಣದಲ್ಲಿ ಇಬ್ಬರು ಕಾನ್ಸ್‌ಟೇಬಲ್ ಸೇರಿ 11 ಆರೋಪಿಗಳ ಬಂಧನವಾಗಿದೆ.
ಬಂಧಿತರು ನೀಡಿದ ಸುಳಿವಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿ 5 ಕೆ.ಜಿ.ಗಾಂಜಾ ಜಪ್ತಿ ಮಾಡಿ ಸಿಸಿಬಿ ಇನ್ಸ್‌ಪೆಕ್ಟರ್ ಅಶೋಕ್ ವಿಚಾರಣೆ ನಡೆಸ್ತಿದ್ದಾರೆ. ಪೊಲೀಸರು ಡ್ರಗ್ಸ್ ದಂಧೆಯಲ್ಲಿ ಶಾಮೀಲು ಪ್ರಕರಣ ತನಿಖೆಯನ್ನು ಆರ್.ಟಿ.ನಗರ ಪೊಲೀಸ್ ಠಾಣೆಯಿಂದ ಸಿಸಿಬಿ ವರ್ಗಾವಣೆಯಾಗುತ್ತಿದ್ದಂತೆ ಸಿಸಿಬಿ ಮಾದಕದ್ರವ್ಯ ನಿಗ್ರಹದಳ ಎಸಿಬಿ ಗೌತಮ್, ಇನ್ ಸ್ಪೆಕ್ಟರ್ ಅಶೋಕ್ ನೇತೃತ್ವದಲ್ಲಿ ಸೆರೆಸಿಕ್ಕ ಆರೋಪಿಗಳನ್ನು ವಿಚಾರಣೆ ನಡೆಸ್ತುದ್ದು ಒರಿಸ್ಸಾದಿಂದ ಗಾಂಜಾ ತಂದು ಇಲ್ಲಿ ಮಾರಾಟ ಮಾಡ್ತಿದ್ರ ಬಗ್ಗೆ ಪೊಲೀಸ್ರಿಗೆ ಸುಳಿವು ಸಿಕ್ಕಿದೆ.
ಪೂಜಾ ಮತ್ತು ಶಿವಪಾಟೀಲ್‌ಇಬ್ಬರು ಸ್ನೇಹಿತರಾಗಿದ್ದು ಕಳೆದ ಒಂದು ವರ್ಷಗಳಿಂದ ಗಾಂಜಾ ಮಾರಾಟ ಮಾಡುತ್ತಿದ್ದರು. ಎನ್ನಲಾಗುತ್ತಿದೆ. ಒಡಿಶಾದಲ್ಲಿ ನೆಲೆಸಿದ್ದ ಪೂಜಾನನ್ನು ಸಂಪರ್ಕಿಸಿ ನಗರಕ್ಕೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಬಿಟಿಎಂ ಲೇಔಟ್, ಕೋರಮಂಗಲ ಸೇರಿದಂತೆ ನಗರದ ಹಲವು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
PublicNext
27/01/2022 03:51 pm