ಆನೇಕಲ್ : ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಇನೋವಾ ಕಾರಿನಲ್ಲಿ ಬಂದಿದ್ದವರ ಮೇಲೆ ಹಲ್ಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಸಮಂದೂರು ಗ್ರಾಮ ಗುಡ್ನಹಳ್ಳಿ ಬಳಿ ನಡೆದಿದೆ.
ಜ.18 ರ ರಾತ್ರಿ ಗುಡ್ನಹಳ್ಳಿ ಬಳಿರುವ ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಇನೋವಾ ಕಾರೊಂದು ಬಂದಿತ್ತು. ಇದೇ ವೇಳೆಗೆ ಇಬ್ಬರು ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಪೆಟ್ರೋಲ್ ಹಾಕಿಸಿಕೊಂಡು, ಇನೋವಾ ಕಾರಿನವರಿಗೆ ಹಣ ಕೊಡುವಂತೆ ದಬ್ಬಾಳಿಕೆ ಮಾಡಿದ್ದಾರೆ.
ಈ ವೇಳೆ ಕಾರ್ ನಲ್ಲಿ ಇದ್ದ ಕುಟುಂಬದವರು ಹಣ ಕೊಡದ ಕಾರಣಕ್ಕೆ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಬಳಿಕ ಪೆಟ್ರೋಲ್ ಬಂಕಿನಲ್ಲಿ ಇದ್ದ ಚಾಕುವನ್ನ ತೆಗೆದುಕೊಂಡು ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ, ಹಲ್ಲೆ ಮಾಡುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಂತಹ ಪುಂಡರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
PublicNext
19/01/2022 02:27 pm