ಬೆಂಗಳೂರು : ಮಾಜಿ ಕಾರ್ಪೊರೇಟರ್ ವ್ಯಕ್ತಿಯೊಬ್ಬನಿಗೆ ಮಾರಾಣಂತಿಕವಾಗಿ ಹಲ್ಲೆ ಮಾಡಿಸಿದ್ದಾರೆಂದು ಆರೋಪಿಸಲಾಗಿದೆ. ವಿಜಿನಪುರ ವಾರ್ಡ್ ಮಾಜಿ ಕಾರ್ಪೊರೇಟರ್ ಎಸ್.ರಾಜು ವಿರುದ್ದ ಹಲ್ಲೆ ಮಾಡಿಸಿದ ಆರೋಪ ಕೇಳಿಬಂದಿದೆ.
ಜನವರಿ 6 ರ ರಾತ್ರಿ 8.30 ಕ್ಕೆ ವಿಜಿನಪುರದಲ್ಲಿ ಪುಷ್ಪರಾಜು ಎಂಬುವವರಿಗಡ ದುಷ್ಕರ್ಮಿಗಳು ಮಾರಾಣಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಹಲ್ಲೆ ಹಿಂದೆ ಮಾಜಿ ಕಾರ್ಪೊರೇಟರ್ ರಾಜು ಕೈವಾಡ ಇದೆ ಎಂದು ಪುಷ್ಪರಾಜು ಪತ್ನಿ ಆರೋಪಿಸಿದ್ದಾರೆ.
ಜೈಮಾರುತಿನಗರ ನಿವಾಸಿಯಾಗಿರುವ ಪುಷ್ಪರಾಜ್ ಸಚಿವ ಭೈರತಿ ಜೊತೆ ಓಡಾಡಿಕೊಂಡು ಏರಿಯಾದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಸುತ್ತಿದ್ದ . ಈ ವೇಳೆ ಪುಷ್ಪರಾಜ್ ಎಸ್.ರಾಜು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರಂತೆ ಈ ವಿಚಾರ ಎಸ್.ರಾಜುಗೆ ಗೊತ್ತಾಗಿ ಹಲ್ಲೆ ಮಾಡಿಸಿದ್ದಾರೆಂಬ ಅನುಮಾನ ವ್ಯಕ್ತಪಡಿಸಲಾಗಿದೆ.
ನಾಲ್ವರು ದುಷ್ಕರ್ಮಿಗಳು ಹೆಲ್ಮೆಟ್ ಹಾಕಿಕೊಂಡು ಬಂದು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆಂದು ತಿಳಿದು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ರಾಮಮೂರ್ತಿ ನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
PublicNext
14/01/2022 07:52 pm