ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆ ಬೀರುವಿನಲ್ಲಿ ಲಕ್ಷ ಲಕ್ಷ ಹಣ ಎತ್ತಿಟ್ಟ; ʼರಾಬರಿʼ ಡ್ರಾಮಾ ಮಾಡಿ ಸಿಕ್ಕಿ ಬಿದ್ದ!

ಬೆಂಗಳೂರು: ಅದು ಮೈಸೂರು ರಸ್ತೆ, ಮೈಮೇಲೆ ಚೆಲ್ಲಾಡಿರೋ ಖಾರದ ಪುಡಿ. ನೀರಿನ ಬಾಟಲ್ ಹಿಡಿದು ಮುಖ ತೊಳೆದು ಕೊಳ್ತಿರೋ ಕಿಲಾಡಿ... ಈತನ ಹೆಸ್ರು ಅರುಣ್ ಕುಮಾರ್. ತನ್ನ ಕಣ್ಣಿಗೆ ಖಾರದ ಪುಡಿ ಎರಚಿ ಹಣ ರಾಬರಿ ಮಾಡಿದ್ದಾರೆ ಎಂದು ರಸ್ತೆಯಲ್ಲೇ ರಂಪ‌ ಮಾಡಿ 112 ಕ್ಕೆ ಕರೆ ಮಾಡಿ ರಾಬರಿ ವಿವರ ನೀಡಿದ್ದ. ರಾಬರಿ ಮ್ಯಾಟ್ರು ಕೇಳಿ ಬ್ಯಾಟರಾಯನಪುರ ಪೊಲೀಸ್ರು ಗಾಬರಿಯಾಗಿ ಸ್ಪಾಟ್ ಗೆ ಹೋಗಿದ್ರು‌. ಬಳಿಕ ಅರುಣ್ ಕುಮಾರ್ ನನ್ನು ಠಾಣೆ‌ಗೆ ಕರೆಸಿ ವಿಚಾರಣೆ ಶುರು ಮಾಡಿದ್ರು. ಈ ವೇಳೆ ಅರುಣ್ ಹೇಳಿಕೆ ಕಂಡು ಪೊಲೀಸ್ರಿಗೆ ಕಳ್ಳ ಸಿಕ್ಕ ಅನ್ನೋ ಖುಷಿ ಒಳಗೊಳಗೆ ಆಗ್ತಿತ್ತು. ಯಾಕಂದ್ರೆ ಅಲ್ಲಿ ರಾಬರಿನೇ ಆಗಿರ್ಲಿಲ್ಲ!

ಜೆ.ಪಿ. ನಗರ ನಿವಾಸಿ ಅರುಣ್ ಕುಮಾರ್ ಶಿವಾಜಿನಗರದ ಅಟ್ಟಿಕಾ ಗೋಲ್ಡ್ ನಲ್ಲಿ 6 ತಿಂಗಳಿಂದ ಕೆಲಸ‌ ಮಾಡ್ತಿದ್ದ. ಹಣವನ್ನು ಬೇರೆ ಬೇರೆ ಬ್ರಾಂಚ್ ತಲುಪಿಸೋ ಕೆಲಸ ಮಾಡ್ತಿದ್ದ ಅರುಣ್, ಕೇಂದ್ರ ಕಚೇರಿಯಿಂದ 8 ಲಕ್ಷ ರೂ. ಪಡೆದವ ಸೀದಾ ಮನೆ ಸೇರಿದ್ದ. ಮನೆಯಲ್ಲಿ 4 ಲಕ್ಷವಿಟ್ಟು, ನಾಯಂಡಹಳ್ಳಿಗೆ ಬಂದಿದ್ದ. ಅಲ್ಲಿನ ಬ್ರಾಂಚ್ ಗೆ 4 ಲಕ್ಷ ನೀಡಿ ನಾಯಂಡಹಳ್ಳಿ ಮೆಟ್ರೋ ನಿಲ್ದಾಣ ಬಳಿಯ ಫ್ಲೈಓವರ್ ಮೇಲೆ ರಾಬರಿ ಸೀನ್‌ ಕ್ರಿಯೇಟ್ ಮಾಡಿದ್ದ.

ಈತನ ಡ್ರಾಮಾ ಬಯಲಾದ ನಂತರ, ತನ್ನ ಅಕ್ಕನ ಸಂಸಾರ ಸರಿ‌ಮಾಡಲು ಹಣ ಬೇಕಿತ್ತು, ಬಾಸ್ ಬಳಿ‌ ಹಣ ಕೇಳಿದ್ರೆ ಕೊಡಲಿಲ್ಲ. ಹೀಗಾಗಿ ರಾಬರಿ ನಾಟಕ‌ವಾಡಿ‌ ಹಣ ಹೊಡೆಯಲು ಪ್ಲಾನ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಎರಡೇ ಗಂಟೆಯಲ್ಲಿ ರಾಬರಿ ಕೇಸ್ ಟ್ರೇಸ್ ಮಾಡಿದ ಬ್ಯಾಟರಾಯನಪುರ ಇನ್‌ ಸ್ಪೆಕ್ಟರ್, ಚಾಲಾಕಿ ಅರುಣ್ ಕುಮಾರ್ ನಿಂದ 4‌ ಲಕ್ಷ ರೂ. ರಿಕವರಿ ಮಾಡಿದ್ದಾರೆ. ‌ಈ ಮೂಲಕ ಕಂಪ್ಲೇಂಟ್ ಕೊಟ್ಟವನೇ ಆರೋಪಿಯಾಗಿ ಅಂದರ್ ಆಗಿದ್ದಾನೆ.

Edited By : Manjunath H D
PublicNext

PublicNext

13/01/2022 10:35 am

Cinque Terre

38.6 K

Cinque Terre

1

ಸಂಬಂಧಿತ ಸುದ್ದಿ