ದೊಡ್ಡಬಳ್ಳಾಪುರ : ಗಂಡನ ಕೊಲೆಗೈದು ಫಿಟ್ಸ್ ಬಂದು ಸತ್ತನೆಂದು ಕಥೆ ಕಟ್ಟಿ ಸಂಬಂಧಿಕರನ್ನು ನಂಬಿಸಿದ ಹೆಂಡತಿ, ಗಂಡನ ದಹನ ಕ್ರಿಯೆ ನಡೆಸಿಬಿಟ್ಟಿದ್ದಳು. ತಾಯಿ ನಡೆಸಿದ ಕೊಲೆ ರಹಸ್ಯವನ್ನು ಆಕೆ ಮಗನೇ ಸಂಬಂಧಿಗಳ ಮುಂದೆ ಬಾಯ್ಬಿಟ್ಟಿದ್ದ. ಗಂಡನ ಹಾಲು ತುಪ್ಪ ಕಾರ್ಯ ಮುಗಿಸಿ 11ನೇ ದಿನದ ಕಾರ್ಯಕ್ಕೂ ಬಾರದೆ ತಲೆಮರೆಸಿಕೊಂಡಿದ್ದ ಹೆಂಡತಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ನಿವಾಸಿ ರಾಘವೇಂದ್ರ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಅಪ್ಪನ ಕೊಲೆ ಕಣ್ಣಾರೆ ಕಂಡಿದ್ದ ಮಗ ಪವನ್ ಕುಮಾರ್ ಹೇಳಿಕೆ ಕೊಲೆ ಆರೋಪಿಗಳನ್ನು ಬಂಧಿಸಲು ನೆರವಾಗಿದೆ. ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಹೆಂಡತಿ ಶೈಲಜಾ , ಅತ್ತೆ ಲಕ್ಷ್ಮಿದೇವಮ್ಮ, ಶೈಲಜಾಳ ಪ್ರಿಯಕರ ಹನುಮಂತನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಶೈಲಜಾ ಅಲ್ಲಿಯೇ ಕೆಲಸ ಮಾಡುತ್ತಿದ್ದ ಹನುಮಂತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ಳು. ಈ ವಿಚಾರಕ್ಕೆ ಸಂಬಂಧಿಸಿ ಹನುಮಂತನ ಹೆಂಡತಿ ಮತ್ತು ಶೈಲಜಾ ಮಧ್ಯೆ ಜಗಳವಾಗಿತ್ತು. ಈ ಸಂದರ್ಭ ರಾಘವೇಂದ್ರ ತನ್ನ ಚಪ್ಪಲಿಯನ್ನು ಹನುಮಂತನ ಪತ್ನಿಗೆ ಕೊಟ್ಟು, ನನ್ನ ಹೆಂಡತಿಗೆ ಬುದ್ಧಿ ಕಲಿಸು ಎಂದಿದ್ದ. ಅಕ್ರಮ ಸಂಬಂಧಕ್ಕೆ ತಡೆಯಾಗಿದ್ದ ರಾಘವೇಂದ್ರನನ್ನೇ ಡಿ. 27ರಂದು ಶೈಲಜಾ, ಲಕ್ಷ್ಮಿದೇವಮ್ಮ, ಹನುಮಂತ ಸೇರಿ ಲಟ್ಟಣಿಗೆಯಿಂದ ಹೊಡೆದು ಸಾಯಿಸಿದ್ದಾರೆ. ಕೊಲೆಯನ್ನು ಪವನ್ ಕಣ್ಣಾರೆ ಕಂಡಿದ್ದ ಮತ್ತು ಅಪ್ಪನ ಕೊಂದವರನ್ನು ಜೈಲಿಗಟ್ಟುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾನೆ.
PublicNext
12/01/2022 09:28 pm