ಬೆಂಗಳೂರು : ಗಾಂಜಾಗೂ ಸಿಲಿಕನ್ ಸಿಟಿಗೂ ಬಿಟ್ಟು ಬಿಡದ ನಂಟು,ಯುವಪೀಳಿಗೆ ಟಾರ್ಗೆಟ್ ಮಾಡಿಕೊಂಡು ಅದೇಷ್ಟೇ ರೌಡಿ ಶೀಟರ್ ಗಳು ನಗರದಲ್ಲಿ ಗಾಂಜ ದಂಧೆ ನಡೆಸ್ತಿದ್ದಾರೆ. ಅದ್ರಲ್ಲಿ ಮುಖ್ಯವಾಗಿ ಸಿಟಿ ಸೌತೂ ಅಂಡ್ ವೆಸ್ಟ್ ಭಾಗದ ಏರಿಯಾದಲ್ಲಿ.ಇಲ್ಲೇಲ್ಲಾ ಗಾಂಜ ಅಂದ್ರೆ ಮೊದಲು ಹೆಸರು ಕೇಳಿಬರೋದೆ, ಕುಳ್ಳು ರಿಜ್ವಾನ್ , ಉಲ್ಲಾಳ್ ಕಾರ್ತಿ, ಹಬೀಬ್ ಮತ್ತು ಸ್ಟಾರ್ ಸುನೀಲ.
ಎಸ್ ಈ ಈ ನಾಲ್ಕು ಜನರದ್ದು ಒಂದೇ ಟೀಂ ಸೌತೂ, ವೆಸ್ಟೂ ಅಂತ ಡಿವೈಡ್ ಮಾಡಿಕೊಂಡು ಗಾಂಜ ದಂಧೆ ನಡೆಸ್ತಿದ್ದಾರೆ. ಸದ್ಯ. ಬೆಂಗಳೂರಿನ ಕೆಂಪೇಗೌಡನರ ಪೊಲೀಸ್ರು ಈ ದಂಧೆಕೋರರಿಗರ ಸರಿಯಾಗೆ ಟಕ್ಕರ್ ಕೊಟ್ಟಿದ್ದಾರೆ. ಇವ್ರು ಡೀಲ್ ಮಾಡಿತ್ತ ಅರ್ಥಾತ್ ಇವ್ರಿಗೆ ಗಾಂಜ ಸಪ್ಲೈ ಮಾಡ್ತಿದ್ದ ಬುಡಕ್ಕೆ ಕೈ ಹಾಕಿ ಬರೋಬ್ಬರಿ 200kg ಗಾಂಜಾ ಸೀಜ್ ಮಾಡಿದ್ದಾರೆ.
ಅಂದಹಾಗೆ ದಾಳಿ ವೇಳೆ ತಗಲಾಕಿಗೊಂಡಿರೊದು ಗಾಂಜಾ ಬೆಳೆಗಾರರು ಹಾಗೂ ಮಾರಾಟಗಾರರು.ಪ್ರಕರಣ ಅಂಬಂಧ ಆಂಧ್ರಪ್ರದೇಶದ
ಪೋತಯ್ಯ, ಪಲ್ಲೆಂ, ವಂಥಲಾರಮೇಶ್, ಕೊಂಡಜಿ ಪ್ರಸಾದ್ ಬಂಧಿಸಿರೋ ಖಾಕಿ ತನಿಖೆ ಮುಂದುವರಿಸಿದೆ.
ಆಂದ್ರದಲ್ಲಿ ಬೆಳೆದ ಗಾಂಜವನ್ನು ನಗರದ ಕುಖ್ಯಾತ ರೌಡಿಗಳಿಗೆ ಸರಬರಾಜು ಮಾಡುತಿದ್ದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಬಂಧಿತರಿಂದ 60 ಲಕ್ಷ ಮೌಲ್ಯದ 2೦೦ ಕೆಜಿ ಗಾಂಜಾ ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
PublicNext
09/01/2022 01:36 pm