ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6 ತಿಂಗಳ ಹಿಂದೆ ಮದುವೆ.. ಅನುಮಾನಾಸ್ಪದವಾಗಿ ಯುವತಿ ಸಾವು

ಬೆಂಗಳೂರು ; ಈಗಷ್ಟೇ ಕೇಲವ 6 ತಿಂಗಳ ಹಿಮದೆ ಹಸೆಮಣೆ ಏರಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಜಪುರ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು ಮೂಲದ ರಾಣಿ(21) ಅನುಮಾಸ್ಪದ ರೀತಿಯಲ್ಲಿ ಸಾವಿಗೀಡಾದ ಯುವತಿ, ಬೆಂಗಳೂರಿನ ಟೀಚರ್ಸ್ ಕಾಲೋನಿಯ ರಾಣಿ ಸುಮಾರು ಆರು ತಿಂಗಳ ಹಿಂದೆ ಆನೇಕಲ್ ತಾಲೂಕಿನ ರಾಜಾಪುರ ಗ್ರಾಮದ ಯಶವಂತನ್ನ ಪ್ರೀತಿಸಿ ಮದುವೆ ಆಗಿದ್ದರು.

ಮನೆಯವರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿದ್ದರು. ಇನ್ನು ಯಶವಂತ್ ಈಗಾಗಲೇ ಒಂದು ಮದುವೆಯಾಗಿದ್ದು ಅದನ್ನು ಮರೆಮಾಚಿ, ರಾಣಿಯನ್ನು ಎರಡನೇ ಮದುವೆಯಾಗಿದ್ದ.

ಅಂತರ್ಜಾತಿ ವಿವಾಹ ಆಗಿರುವ ಕಾರಣ ಗಂಡನೇ ನೇಣು ಹಾಕಿ ಕೊಲೆ ಮಾಡಿಸಿದ್ದಾನೆ ಎಂದು ರಾಣಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ ಯಶವಂತ್ ಮಗಳನ್ನು ಕೊಲೆ ಮಾಡಿ ಸಾವಿನ ಬಗ್ಗೆ ಮರೆಮಾಚಿ ಬೇರೆ ಕಡೆ ಎಸ್ಕೇಪ್ ಆಗಿದ್ದ ಎಂದು ಪೊಲೀಸ್ ಹೇಳಿಕೆ ನೀಡಿದ್ದಾರೆ.

ಸ್ಥಳಕ್ಕೆ ಹೆಬ್ಬಗೋಡಿ ಡಿವೈಎಸ್ಪಿ ಮಲ್ಲೇಶ್ ಜಿಗಣಿ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು, ಯುವತಿಯ ಪತಿ ಯಶವಂತ ನನ್ನ ಜಿಗಣಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

05/01/2022 05:45 pm

Cinque Terre

318

Cinque Terre

0

ಸಂಬಂಧಿತ ಸುದ್ದಿ