ಬೆಂಗಳೂರು : ಹಿಮಾಚಲ ಪ್ರದೇಶದಿಂದ ಮಾದಕ ವಸ್ತು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
ಕೇರಳಾ ಮೂಲದ ಆರೋಪಿ ಬಸಿಲ್ ಜಾರ್ಜ್ ಹಿಮಾಚಲ ಪ್ರದೇಶದಿಂದ ಚರಸ್ ತರಿಸಿಕೊಳ್ಳುತ್ತಿದ್ದ ಬಳಿಕ ಬೆಂಗಳೂರಿನ ಕಾಲೇಜ್ ವಿದ್ಯಾರ್ಥಿಗಳು, ಪ್ರತಿಷ್ಠಿತ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ.
ಈ ವಿಷಯದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ಬಂಧಿತನಿಂದ 5.8 ಲಕ್ಷ ಮೌಲ್ಯದ 575 ಗ್ರಾಂ ಚರಸ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
28/12/2021 01:11 pm