ಬೆಂಗಳೂರಿ: ಯಾರು ಇಲ್ಲದ ಫ್ಲ್ಯಾಟ್ಗಳನ್ನೇ ಗುರುತು ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಅರೆಸ್ಟ್ ಮಾಡುವಲ್ಲಿ ಹೆಣ್ಣೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ಮಾಡ್ತಿದ್ದ ಗ್ಯಾಂಗ್ಗೆ ಅಪಾರ್ಟ್ಮೆಂಟ್ ಸೆಕ್ಯುರಿಟಿಯೇ ಲೀಡರ್ ಅನ್ನೋದು ಶಾಕಿಂಗ್ ವಿಷಯವಾಗಿದೆ.
ಹಿಕಮತ್ ಶಾಹಿ, ರಾಜು ಬಿ.ಕೆ. ಚಾಮ್ಡಿ, ಜೀವನ್ ಮತ್ತು ಗೋರಕ್ ಕಾಲು ಬಂಧಿತ ಆರೋಪಿಗಳು ಹಾಗೂ ಸೆಕ್ಯುರಿಟಿ ಕೆಲಸ ಮಾಡ್ತಿದ್ದ ಕರಣ್ ಬಿಸ್ವಾ ಪ್ರಮುಖ ಆರೋಪಿಯಾಗಿದ್ದಾನೆ.
ನಗರದ ಹೆಣ್ಣೂರು ಸುತ್ತಮುತ್ತ ಈ ಗ್ಯಾಂಗ್ ಕಳ್ಳತನ ಮಾಡುತಿತ್ತು.ಯಾವ ಯಾವ ಫ್ಲ್ಯಾಟ್ನಲ್ಲಿ ಮಾಲೀಕರು ಇಲ್ಲದೆ ಹೊರಗೆ ಹೋಗಿದ್ದಾರೆ ಎಂಬ ಮಾಹಿತಿಯನ್ನು ಮೊದಲು ಪಡೆಯುತ್ತಿದ್ದರು ಹಾಗೂ ಫ್ಲಾಟ್ ನಿವಾಸಿಗಳೇ ನಾವು ಇನ್ನು ಸ್ವಲ್ಪ ದಿನ ಇರೋದಿಲ್ಲಾ ಫ್ಲ್ಯಾಟ್ ಕಡೆ ನೋಡಿಕೊ ಎಂದು ಹೇಳುತ್ತಿದ್ರಂತೆ ಸೆಕ್ಯುರಿಟಿ ಗಾರ್ಡ್ ಬಳಿ. ಇದನ್ನೇ ಅಡ್ವಟೇಂಜ್ ಆಗಿ ತೆಗೆದುಕೊಳ್ಳುತ್ತಿದ್ದ ಈತ ಬಳಿಕ ಬಾಂಬೆ ಯಲ್ಲಿ ಇರುವ ತನ್ನ ಕಳ್ಳತನ ಗ್ಯಾಂಗ್ ಗೆ ಮಾಹಿತಿ ನೀಡಿ ಕರೆಸಿಕೊಳ್ಳುತ್ತಿದ್ದ.ಅಲ್ಲಿಂದ ಬೆಂಗಳೂರಿಗೆ ಬಂದು ಕಳ್ಳತನ ಮಾಡ್ತಿತ್ತು ಈ ಖತರ್ನಾಕ್ ಗ್ಯಾಂಗ್ ನಂತರ ನಾಲ್ವರು ಎಸ್ಕೇಪ್ ಅಗ್ತಿದ್ರು. ಅದ್ರೆ ಸೆಕ್ಯುರಿಟಿ ಗಾರ್ಡ್ ಮಾತ್ರ ಯಾರಿಗೂ ಹೇಳದೆ ಅಲ್ಲಿಯೇ ಕೆಲಸ ಮಾಡ್ತಿದ್ದ.
ಚಾಲಾಕಿ ಗಾರ್ಡ್ ಕಳ್ಳತನದ ಮಾಹಿತಿ ತನಗೆ ಗೊತ್ತೆ ಇಲ್ಲಾ ಎಂಬಂತೆ ನಟಿಸುತಿದ್ದ. ಸದ್ಯ ಸೆಕ್ಯುರಿಟಿ ಗಾರ್ಡ್ ಸೇರಿ ಐವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಬಂಧಿತರಿಂದ 9.3 ಲಕ್ಷ ಹಣ ಹಾಗು ಇಪ್ಪತ್ತೈದು ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
Kshetra Samachara
09/12/2021 05:36 pm