ಬೆಂಗಳೂರು: ಮೊಬೈಲ್ ಆ್ಯಪ್ ಮುಖಾಂತರ ಸಾಲ ನೀಡಿ ಅಧಿಕ ಬಡ್ಡಿ ಪೀಕುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಮರಾಜ್ ಮತ್ತು ದರ್ಶನ್ ಬಂಧಿತ ಆರೋಪಿಗಳು. ಲೈಕೋರೈಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಮುಖ್ಯ ಕಂಪನಿ ಕಂಪನಿ ತೆರೆದು ಕ್ಯಾಷ್ ಮಾಸ್ಟರ್, ಕ್ರೇಜಿ ರುಪೀ ಎಂಬ ಆ್ಯಪ್ ನಲ್ಲಿ ವಾರದ ಬಡ್ಡಿಗೆ ಸಾಲ ಕೊಡುತ್ತಿದ್ದರು. ಬಳಿಕ ಹಣವನ್ನ ಹಿಂದಿರುಗಿಸಿದರೂ ಕೂಡ ಅಧಿಕ ಬಡ್ಡಿಗಾಗಿ ಗ್ರಾಹಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು.
ಮೊದಲು ಚೀನಾ ದೇಶದ ಪ್ರಜೆಯೊಬ್ಬ ಈ ಕಂಪನಿಯನ್ನ ತೆರದಿದ್ದ. ಬಳಿಕ ಒಬ್ಬರ ಹೆಸರಿನಲ್ಲಿ ಐದಾರು ಕಂಪನಿಗಳನ್ನ ತೆರೆದಿದ್ದರು. ಯಾವುದಾದರೂ ಆ್ಯಪ್ ಗಳ ಬಗ್ಗೆ ಸಾರ್ವಜನಿಕರು ರಿಪೋರ್ಟ್ ಮಾಡಿದ್ರೆ, ಮತ್ತೊಂದು ಆ್ಯಪ್ ಮುಖಾಂತರ ಕಾರ್ಯನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು.
ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 83 ಕಂಪ್ಯೂಟರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಚೀನಾ ದೇಶದ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
Kshetra Samachara
26/11/2021 01:03 pm