ಬೆಂಗಳೂರು : ಇದು ಯಲಹಂಕ ಬಳಿಯ ಸಹಕಾರ ನಗರದ 12ನೆ ಮುಖ್ಯರಸ್ತೆಯಲ್ಲಿರುವ 12 ಜನ ಮಾಲೀಕರ ಮೂಕ ವೇದನೆ ಕಥೆ. ಹೌದು ವೀಕ್ಷಕರೆ ಹೀಗೆ ರಸ್ತೆಯಲ್ಲಿ ಮುಖವಿಸ್ಮಿತವಾಗಿ ನಿಂತಿರುವ ಹಿರಿಯ ಜೀವಿಗಳು 40 ವರ್ಷಗಳ ಹಿಂದೆಯೇ ತಮ್ಮ ಮುಂದಿನ ಜೀವನಕ್ಕಾಗಿ ಇಲ್ಲಿ ಮಿನಿಸ್ಟರಿ ಆಪ್ ಕಮ್ಯುನಿಕೇಶನ್ ಎಂಪ್ಲಾಯ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್
ಇವರ ಕಡೆಯಿಂದ ಜಾಗ ಖರೀದಿಸಿದ್ದರು.
ಆದ್ರೆ ಈಗ 40 ವರ್ಷದ ನಂತರ ಚಿನ್ನದ ಬೆಲೆ ಬಂದಿರುವ ಈ ಜಾಗಕ್ಕೆ ಈಗ ಫೈಟ್ ಶುರುವಾಗಿದೆ. ಮೂಲ ಮಾಲೀಕರಾದ ಜಯಮ್ಮ ಹಾಗೂ ಅವರ ಮಕ್ಕಳು ಸದ್ಯ ಹಾಲಿ ಇರುವ ಎಲ್ಲಾ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ ಮಿನಿಸ್ಟರಿ ಆಪ್ ಕಮ್ಯುನಿಕೇಶನ್ ಎಂಪ್ಲಾಯ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ನಮಗೆ ಸಂಪೂರ್ಣ ಹಣ ಸಂದಾಯ ಮಾಡಿಲ್ಲಾ ಹೀಗಾಗಿ ನಮ್ಮ ಭೂಮಿ ನಮಗೆ ವಾಪಸ್ಸು ಕೊಡಿ ಎಂದು ತಕರಾರು ಮಾಡುತ್ತಿದ್ದಾರೆ ಅಂತೆ. ಅಲ್ಲದೆ ಖಾಲಿ ಇರುವ ನಾಲ್ಕು ಸೈಟ್ ಗಳಿಗೆ ರಾತ್ರೋ ರಾತ್ರಿ ಬೇಲಿ ಹಾಕ್ತಿದ್ದಾರೆ.
ಅದು ಹೇಗೆ ತೊಂದರೆ ಆಗ್ತಿದೆ ಅಂತ ಮಾಲೀಕರು ಹೇಳ್ತಾರೆ ನೋಡಿ.
ಅಧ್ಯಕ್ಷ ದಾಮೋದರನ್ ಮಾಡಿದ ತಪ್ಪಿಗೂ ಅಥವಾ BDA ಮಾಡಿದ ಪ್ರಮಾದಕ್ಕೋ ಏನೋ ಇದುವರೆಗೂ ಈ ಲೇ ಔಟ್ ಸಮಸ್ಯೆ ಬಗೆ ಹರಿದಿಲ್ಲಾ.ಕಳೆದ ಆರು ವರ್ಷಗಳಿಂದ ಕೋರ್ಟ್ ನಲ್ಲಿ ಕೇಸ್ ಇದ್ದರು ಕೂಡ ಏನು ತೊಂದರೆ ಆಗಿರಲಿಲ್ಲ ಆದ್ರೆ ಈಗ ಸಡನ್ ಆಗಿ ಇಲ್ಲಿ ಜೆಸಿಬಿಗಳು ಸೌಂಡ್ ಮಾಡಲು ಶುರುಮಾಡಿವೆ. ಅಲ್ಲದೆ ರಾತ್ರೋ ರಾತ್ರಿ ಖಾಲಿ ಜಾಗದಲ್ಲಿ ಶೆಡ್ ಹಾಕಿ ವಠಾರ ನಿರ್ಮಾಣ ಮಾಡೋಕೆ ಪ್ಲ್ಯಾನ್ ಕೂಡ ನಡೀತಿದೆ.
ಈ ಬಗ್ಗೆ ಸೊಸೈಟಿಯ ಈಗಿನ ಅಧ್ಯಕ್ಷರನ್ನ ನಿವಾಸಿಗಳು ಸಂಪರ್ಕಿಸಿದರೆ ಅವರು ಈಗ ಡೋಂಟ್ ಕೇರ್ ಅಂತಿದ್ದಾರೆ. ಇನ್ನು ಜಾಗದ ಬಗ್ಗೆ ಕೋರ್ಟ್ ಇಂದಲ್ಲ ನಾಳೆ ತೀರ್ಮಾನ ಮಾಡುತ್ತೆ ಆದ್ರೆ ಈಗ ಅತಿಕ್ರಮಣ ಮಾಡುವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು, ನಮಗೆ ಹಾಗೂ ನಮ್ಮ ಜಾಗಕ್ಕೆ ರಕ್ಷಣೆ ಒದಗಿಸಬೇಕು ಅಂತ ಲೇಔಟ್ ನಿವಾಸಿಗಳ ಮುಖ್ಯ ಬೇಡಿಕೆಯಾಗಿದೆ
ಸದ್ಯ ಈ ಭೂ ಸುಳಿಯಲ್ಲಿ ಕೆಲವು ಪ್ರಮುಖ ರಾಜಕೀಯ ನಾಯಕರು ಹಾಗೂ ಕೆಲ ನಟೋರಿಯಸ್ ರೌಡಿಗಳ ಹೆಸರು ಕೇಳಿ ಬರುತ್ತಿದ್ದು ಕೋರ್ಟ್ ನಲ್ಲಿರುವ ಜಾಗ ಖಾಲಿ ಒತ್ತುವರಿ ಮಾಡಲೆಂದೇ ಹುನ್ನಾರ ನಡೆಸಿರುವ ಅನುಮಾನ ಕೂಡ ಇದ್ದು ಕೂಡಲೇ ಸ್ಥಳೀಯ ಪೊಲೀಸರು ಈ ಪ್ರಕರಣಕ್ಕೆ ಬ್ರೇಕ್ ಹಾಕಬೇಕಿದೆ.
Kshetra Samachara
24/11/2021 08:42 pm