ಬೆಂಗಳೂರು : ಆ್ಯಪ್ ಗಳ ಮೂಲಕ ಕೋಟಿ ಕೋಟಿ ಪಂಗನಾಮ ಹಾಕುತ್ತಿದ್ದ ಜಾಲವನ್ನು ಭೇದಿಸಿದ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಸೈಬರ್ ಖದೀಮರನ್ನು ಕಟ್ಟಿಹಾಕಿದ್ದಾರೆ. ಹೌದು ಬೆಂಗಳೂರಿನಲ್ಲಿ ಚೀನಿ ಆ್ಯಪ್ ಮೂಲಕ ಕೋಟಿ ಕೋಟಿ ಹಣ ಬಾಚುತ್ತಿದ್ದ ಸೈಬರ್ ಖದೀಮರ ಹಾವಳಿ ಹೆಚ್ಚಾಗಿತ್ತು ಕೇವಲ ಒಂದು ಲಿಂಕ್ ಕಳುಹಿಸುವ ಮೂಲಕ ಕೋಟ್ಯಾಂತರ ರೂಪಾಯಿ ಕದಿಯುತ್ತಿದ್ದವರ ಹೆಡೆಮುರಿ ಕಟ್ಟಿದ್ದಾರೆ.
ಸದ್ಯ ಆ್ಯಪ್ ಗಳ ಮೂಲಕ ದುಡ್ಡಿನ ಆಮಿಷವೊಡ್ಡಿ ಮೋಸ ಮಾಡುತ್ತಿದ್ದ ಬರೋಬ್ಬರಿ 16 ಆರೋಪಿಗಳನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ.
ಬನಶಂಕರಿ, ಕೋಣನಕುಂಟೆ ಠಾಣೆ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ. ಇನ್ನು ಕೀಪ್ ಶೇರ್, ಶ್ಯೂರ್ ಲೈಟ್ ಮತ್ತು ಚೀನಿ ಆ್ಯಪ್ ಗಳ ಮೂಲಕ ಜನರನ್ನ ಸೆಳೆಯುತ್ತಿದ್ದ ಆರೋಪಿಗಳು ಆ್ಯಪ್ ಗಳ ಮೂಲಕ ಉದ್ಯೋಗ ಕೊಡಿಸೋದಾಗಿ ಹೇಳಿ ಮೆಸೇಜ್ ಮಾಡುತ್ತಿದ್ದರು. ಮಾತ್ರವಲ್ಲದೆ ಮನೆಯಲ್ಲೇ ಕೂತು ಲಕ್ಷಾಂತರ ರೂಪಾಯಿ ದುಡಿಬೋದು ಅಂತಾ ಆಮಿಷವೊಡ್ಡುತ್ತಿದ್ದರು.
ನಂತರ ಕರೆ ಮಾಡುವ ಮೂಲಕ ವರ್ಕ್ ಫ್ರಂ ಹೋಂ ಜಾಬ್ ಕೊಡ್ತೀವಿ ಅಂತಾ ಹೇಳಿ 30 ಸಾವಿರ, 50 ಸಾವಿರ ರೂ.ಪಿಕುತ್ತಿದ್ದರು. ಜೊತೆಗೆ ಆ್ಯಪ್ ಗಳ ಮೂಲಕ ನಿಮ್ಮ ಸಂಬಳ ಅಷ್ಟು ಇಷ್ಟು ಅಂತಾ ಲಕ್ಷಾಂತರ ರೂಪಾಯಿ ಫೇಕ್ ನೋಟಿಫಿಕೇಷನ್ ಕಳುಹಿಸುತ್ತಿದ್ದರು.
ಈ ಹಣ ಕ್ಲೈಂ ಮಾಡಿಕೊಳ್ಳೋಕೆ ಹೋದಾಗ ಆ್ಯಪ್ ಗಳ ಬಣ್ಣಾಟ ಬಯಲಾಗುತ್ತಿದ್ದಂತೆ ಮೋಸ ಹೋದ ಜನ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ನಂತರ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಕೋಣನಕುಂಟೆ ಠಾಣೆ ಪೊಲೀಸರಿಂದ 5, ಬನಶಂಕರಿ ಪೊಲೀಸರಿಂದ 11 ಜನ ಆರೋಪಿಗಳ ಬಂಧನವಾಗಿದೆ. ಬಂಧಿತರಿಂದ ಬರೋಬ್ಬರಿ 11 ಕೋಟಿ ರೂ. ಜಪ್ತಿ ಮಾಡಲಾಗಿದ್ದು ಸದ್ಯ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಚೀನಿ ಆ್ಯಪ್ ಚೀಟಿಂಗ್ ಜಾಲದ ಬೆನ್ನಟ್ಟಿರೋ ದಕ್ಷಿಣ ವಿಭಾಗದ ಪೊಲೀಸರು ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
Kshetra Samachara
12/10/2021 12:26 pm