ಹೊಸಕೋಟೆಯ ದೊಡ್ಡಗಟ್ಟಿಗನಬ್ಬೆ ಗ್ರಾಮದಲ್ಲಿ ಕಾಂಪೌಂಡ್ ನಿರ್ಮಾಣದ ವಿಚಾರವಾಗಿ ಗಲಾಟೆ ನಡೆದು ಬಿಜೆಪಿ ಮುಖಂಡ, MTB ಆಪ್ತ ಜನಾರ್ಧನ್ ಗುಂಡು ಹಾರಿಸಿದ್ದಾರೆ ಎಂಬ ದೂರು ತಿರುಮಲಶೆಟ್ಟಿಗಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಒಟ್ಟು ಆರು ಭಾರಿ ವ್ಯಕ್ತಿ ಫೈರಿಂಗ್ ಮಾಡಿದ್ದಾನೆ ಎನ್ನಲಾಗ್ತಿದೆ. ಎರಡು ಭಾರಿ ಗಾಳಿಯಲ್ಲಿ, ನಾಲ್ಕು ಭಾರಿ ಭೂಮಿಗೆ ಗುಂಡು ತಗುಲಿದೆ. ಕಾಂಗ್ರೆಸ್ ಮುಖಂಡ ಸುನೀಲ್ ವಿರುದ್ದ ಜನಾರ್ಧನ್, ಪೈರಿಂಗ್ ಮಾಡಿದ್ದು, ಹೊಸಕೋಟೆಯ ಜನತೆಯಲ್ಲಿ ಭಯ ಹೆಚ್ಚಿಸಿದೆ. ದೂರಿನನ್ವಯ ತನಿಖೆ ನಡೆಯುತ್ತಿದೆ ಎಂದು ಎಸ್.ಪಿ.ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಕ್ರಿಸಿದರು.
ಘಟನಾ ಸ್ಥಳಕ್ಕೆ ಎಎಸ್ಪಿ ಪುರುಷೋತ್ತಮ್, ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಭೇಟಿ ನೀಡಿ ತನಿಖೆ ನಡೆಸ್ತಿದ್ದಾರೆ. ಫೈರಿಂಗ್ ಮಾಡಿದ ಗುಂಡುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ದೊಡ್ಡಗಟ್ಟಿಗಬನಬ್ಬೆ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಉಪವಿಭಾಗದ ಪಿಐ & ಪಿಎಸ್ಐಗಳ ನಿಯೋಜನೆ ಮಾಡಲಾಗಿದೆ.
ಗಲಾಟೆ ರಾಜಕೀಯ ತಿರುವು ಪಡೆಯುವ ಹಿನ್ನೆಲೆ ಪೊಲೀಸರು ಬಂದೋಬಸ್ತ್ ಅನ್ನು ಹೆಚ್ಚಿಸಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..
PublicNext
22/07/2022 08:59 pm