ಬೆಂಗಳೂರು: ನಿನ್ನೆ ಆ ಯುವಕನ ಬರ್ತ್ ಡೇ ಇತ್ತು. ಕುಟುಂಬಸ್ಥರೊಂದಿಗೆ ಖುಷಿ ಹಂಚಿಕೊಂಡ ಆತ, ಅದೇ ಖುಷಿಯಲ್ಲಿ ಸ್ನೇಹಿತರ ಜೊತೆಗೆ ಬರ್ತ್ ಡೇ ಪಾರ್ಟಿಗೆ ಹೋಗಿದ್ದ. ಆದ್ರೆ, ಪತ್ತೆಯಾಗಿದ್ದು ಮಾತ್ರ ಹೆಣವಾಗಿ! ಈ ಭೀಕರ ಕೊಲೆ ಬಗ್ಗೆ ಸವಿವರ ವರದಿ ಇಲ್ಲಿದೆ ನೋಡಿ...
ಹೆಮ್ಮಿಗೆಪುರ-ಕೋನಸಂದ್ರ ಮೈನ್ ರಸ್ತೆಯ ಅಂಡರ್ ಪಾಸ್ ಬಳಿ ಬರ್ಬರವಾಗಿ ಕೊಲೆಯಾಗಿರುವ ಯುವಕನ ಮೃತದೇಹ. ಸ್ಥಳದಲ್ಲಿ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು... ಗೋಳಾಡುತ್ತಿರುವ ಪೋಷಕರು.
ಈ ಮನ ಮಿಡಿಯುವ ದೃಶ್ಯಕ್ಕೆ ಕಾರಣವಾಗಿದ್ದು, ಕೆಂಗೇರಿಯ ಕೋನಸಂದ್ರ ಟು ಹೆಮ್ಮಿಗೆಪುರಕ್ಕೆ ಹೋಗುವ ನೈಸ್ ರೋಡ್ ಅಂಡರ್ ಪಾಸ್. ಇಲ್ಲಿ ಹೀಗೆ ತಲೆನೇ ಇಲ್ಲದಂತೆ ಬರ್ಬರವಾಗಿ ಕೊಲೆಯಾದ ಯುವಕ ಹೇಮಂತ್ ಕುಮಾರ್. ಇಲ್ಲಿನ ಎಚ್ ಗೊಲ್ಲಹಳ್ಳಿ ನಿವಾಸಿ ಹೇಮಂತ್ ಬರ್ತ್ ಡೇ ನಿನ್ನೆ ಇತ್ತು.
ಬೆಳಗ್ಗಿನಿಂದ ಕುಟುಂಬಸ್ಥರ ಜೊತೆಗೆ ಬರ್ತ್ ಡೇ ಖುಷಿ ಹಂಚಿಕೊಂಡ ಆತ, ಮಧ್ಯಾಹ್ನ ನಂತರ ಸ್ನೇಹಿತರೊಂದಿಗೆ ಪಾರ್ಟಿ ಇದೆ. ಕೇಕ್ ಮಾಡೋಕೆ ಫ್ರೆಂಡ್ಸ್ ಕಾಯ್ತಾ ಇದ್ದಾರೆ ಅಂತಾ ಮನೆ ಬಳಿ ಅಕ್ಕನ ದ್ವಿಚಕ್ರ ವಾಹನದಲ್ಲೇ ಕೆಂಗೇರಿ ತನಕ ಡ್ರಾಪ್ ಕೂಡ ತಕೊಂಡಿದ್ದ.
ಹಾಗೇ ಹೋದ ಯುವಕ ಹೇಮಂತ್, ರಾತ್ರಿಯಾದ್ರು ವಾಪಸ್ ಬಂದಿರಲಿಲ್ಲ! ಕಾಲ್ ಮಾಡಿದ್ರೆ, ಫೋನ್ ರಿಸೀವ್ ಮಾಡ್ತಾ ಇರಲಿಲ್ಲ. ರಾತ್ರಿ 11ರ ತನಕ ಕಾಲ್ ಮಾಡಿದ ಕುಟುಂಬಸ್ಥರು, ಫ್ರೆಂಡ್ಸ್ ಜೊತೆ ಇರ್ತಾನೆ ಅಂತಾ ಸುಮ್ಮನಾಗಿದ್ರು. ಆದ್ರೆ, ಬೆಳಗ್ಗೆ ಹೆಮ್ಮಿಗೆಪುರಕ್ಕೆ ಹೋಗೋ, ನೈಸ್ ರೋಡ್ ಅಂಡರ್ ಪಾಸ್ ನಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಯಾಗಿದ್ದ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು.
ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲನೆ ನಡೆಸಿದ ವೇಳೆ ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು . ಶಿರವೇ ಇಲ್ಲದ ಮೃತದೇಹದ ಕೈ ಮೇಲೆ ಡಮರುಗದ ಟ್ಯಾಟು ಪತ್ತೆ ಅಧಾರದ ಮೇಲೆ ಕುಟುಂಬಸ್ಥರಿಗೆ ವಿಚಾರ ತಿಳಿಸಿದ್ರು. ಸ್ಥಳಕ್ಕೆ ಬಂದ ಪೋಷಕರು ಹೇಮಂತ್ ಶವ ಗುರುತಿಸಿ, ಇನ್ನಿಲ್ಲದಂತೆ ಗೋಳಾಡಿದ್ರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೊಲೆ ಹಿಂದಿನ ಮಾಸ್ಟರ್ ಮಿಸ್ಟರಿಗಾಗಿ ಶೋಧ ನಡೆಸುತ್ತಿದ್ದಾರೆ. ಆದ್ರೆ, ಬರ್ತ್ ಡೇ ಸಂಭ್ರಮದಲ್ಲಿದ್ದ ಯುವಕ ಈ ರೀತಿ ಭೀಕರವಾಗಿ ಕೊಲೆಯಾಗಿದ್ದು ದುರಂತವೇ ಸರಿ.
- ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
17/07/2022 09:31 pm