ದೊಡ್ಡಬಳ್ಳಾಪುರ: ದಲಿತರಿಗೆ ಕುಡಿತ ಚಟವನ್ನ ಆಂಟಿಸಿದ ವಂಚಕರು ದೌರ್ಜನ್ಯದಿಂದ ಜಮೀನು ಮಾರಾಟ ಮಾಡಿ ಲಕ್ಷ ಲಕ್ಷ ಹಣ ಕೊಳ್ಳೆ ಹೊಡೆದಿದ್ದಾರೆ. ಜಮೀನು ಮಾರಾಟದಿಂದ ದಲಿತರಿಗೆ ಸಿಕ್ಕಿದ್ದು ಬಿಡಿಗಾಸು ಮಾತ್ರ, ಒಂದೇಡೆ ಜಮೀನು ಇಲ್ಲ ಮತ್ತೊಂದೆಡೆ ವಾಸ ಮಾಡುವ ಮನೆಗಳು ಬೀಳುವ ಸ್ಥಿತಿಯಲ್ಲಿವೆ.
ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಕಾಲೋನಿದ ಸ್ಥಿತಿ ನಿಜಕ್ಕೂ ಕಣ್ಣಿರು ತರಿಸುತ್ತದೆ. ಸುಮಾರು 50 ದಲಿತ ಕುಟುಂಬಗಳು ಕಾಲೋನಿಯಲ್ಲಿ ವಾಸವಾಗಿದ್ದಾರೆ. 40ಕ್ಕೂ ಹೆಚ್ಚು ಕುಟುಂಬಗಳ ಜಮೀನು ಬಲಾಢ್ಯರ ಪಾಲಾಗಿದೆ. ಇನ್ನೂ ವಾಸವಾಗಿರುವ ಮನೆಗಳು ಈಗಲೋ ಆಗಲೋ ಬಿಳುವ ಸ್ಥಿತಿಯಲ್ಲಿವೆ. ಮಳೆಗೆ ಬಿದ್ದ ಮನೆಗಳು, ಬಿರುಕು ಬಿಟ್ಟ ಗೋಡೆಗಳು, ಕಳಚಿ ಬಿದ್ದಿರುವ ಗಾರೆ. ಮನೆ ಕುಸಿಯುವ ಭಯದಲ್ಲೇ ವಾಸ. ಕುಡಿತ ಚಟಕ್ಕೆ ದಾಸರಾದ ಇವರು ತಮ್ಮ ಸಾಗುವಳಿ ಜಮೀನನ್ನು ಮಾರಾಟ ಮಾಡಿ ದಾರುಣ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ.
ದಲಿತರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಲು ಸರ್ಕಾರ ಪ್ರತಿ ಕುಟುಂಬಕ್ಕೂ 3 ಎಕರೆ ಜಮೀನು ನೀಡಿದೆ. ಸರ್ಕಾರ ನೀಡಿದ ಜಮೀನಿನಲ್ಲಿ ಕೃಷಿ ಮಾಡಿ ನೆಮ್ಮದಿಯ ಜೀವನ ಮಾಡುತ್ತಿದ್ದರು. ದಲಿತರ ಬಂಗಾರದ ಬದುಕಿನ ಮೇಲೆ ಕಣ್ಣಾಕಿದ ಇದೇ ಗ್ರಾಮದ ರಾಜಣ್ಣ ಮತ್ತು ನಾರಾಯಣಸ್ವಾಮಿ ಎಂಬುವರು ಗ್ರಾಮಕ್ಕೆ ಭಟ್ಟಿ ಸಾರಾಯಿ ತಂದರು. 15 ವರ್ಷಗಳ ಹಿಂದೆ ದಲಿತರಿಗೆ ಕುಡಿತದ ಚಟ ಅಂಟಿಸಿದ ಇದೇ ನಾರಾಯಣಸ್ವಾಮಿ ರಾಜಣ್ಣ ದಲಿತರ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿಸಿದ್ದಾರೆ. ಬೆಂಗಳೂರಿನ ಧನಿಕರಿಗೆ ಲಕ್ಷ ಲಕ್ಷಕ್ಕೆ ಮಾರಾಟ ಮಾಡಿಸಿದ ರಾಜಣ್ಣ ಮತ್ತು ನಾರಾಯಣ ದಲಿತರಿಗೆ ಕೊಟ್ಟದ್ದು ಮಾತ್ರ ಮೂರ್ನಾಲ್ಕು ಕಾಸ್ ಅಷ್ಟೇ. ಬಾಕಿ ಹಣ ಕೊಡುವಂತೆ ಕೇಳಿದ್ರೆ ದೌರ್ಜನ್ಯ ನಡೆಸಿ ದಲಿತರ ಬಾಯಿ ಮುಚ್ಚಿಸಿದ್ದಾರೆ. ಬಾಕಿ ಹಣ ಕೊಡಿಸುವಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ರೆ ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲವೆಂದು ತಮ್ಮ ನೋವು ತೊಡಿಕೊಂಡರು.
ಜಮೀನು ಕಳೆದುಕೊಂಡು ದಲಿತರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ, ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಅನುದಾನ ಬಿಡುಗಡೆಯಾದರು ಅದರ ಸದ್ಬಳಕೆ ಯಾಗದೆ ವಾಪಸ್ ಆಗಿದೆ, ಪ್ರಾರಂಭಿಕವಾಗಿ ಮನೆಯ ತಳಪಾಯ ಹಾಕಿಸ್ಕೊಕು ದುಡ್ಡಿಲ್ಲದೆ ಅನುದಾನವನ್ನ ಸರ್ಕಾರಕ್ಕೆ ವಾಪಸ್ ಮಾಡಿದ್ದಾರೆ ಇಲ್ಲಿನ ದಲಿತರು. ಜಮೀನು ಕಳೆದುಕೊಂಡ ದಲಿತರು ಸಣ್ಣ ಪುಟ್ಟ ಕೂಲಿ ಮಾಡಿ ಜೀವನ ಮಾಡುತ್ತಿದ್ದಾರೆ. ಬೆಂಗಳೂರಿಂದ ಕೂಗಳೆ ದೂರಲ್ಲಿರುವ ದಲಿತರ ಸ್ಥಿತಿ ಕಾಡಾಂಚಿನಲ್ಲಿರುವ ಅರಣ್ಯವಾಸಿಗಳಿಗಿಂತ ಕೀಳಾಗಿದೆ.
ಕುಡಿತದ ಸಹವಾಸ ಹೆಂಡತಿ ಮಕ್ಕಳ ಉಪವಾಸ ಅನ್ನುವಂತೆ ಕುಡಿತ ಚಟ ದಲಿತರ ಬದುಕನ್ನ ನರಕ ಮಾಡಿದೆ, ದಲಿತರಿಗೆ ಕುಡಿತದ ಚಟ ಆಂಟಿಸಿ ಲಕ್ಷ ಲಕ್ಷ ಹಣ ಕೊಳ್ಳೆ ಹೊಡೆದ ವಂಚಕರು ಐಷಾರಾಮಿ ಜೀವನ ಮಾಡುತ್ತಿದ್ದಾರೆ.
Kshetra Samachara
28/06/2022 09:20 pm