ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಹಪಾಠಿಗಳನ್ನೇ ಕಸ್ಟಮರ್ಸ್ ಮಾಡಿಕೊಂಡಿದ್ದ ಗಾಂಜಾ ಪೆಡ್ಲರ್ಸ್!

ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಸಹಪಾಠಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ದಂಧೆಕೋರರನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಮನೋರಂಜಿತ್ , ಸಂಗೇಶ್ ಬಂಧಿತ ಆರೋಪಿಗಳಾಗಿದ್ದು, ತಮಿಳುನಾಡಿನ ಕೊಯಮತ್ತೂರು ಮೂಲದವರಾಗಿರುವ ಆರೋಪಿಗಳು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಸ್ವತಃ ಮಾದಕ ವ್ಯಸನಿಗಳಾಗಿದ್ದ ಆರೋಪಿಗಳು ತಮಿಳುನಾಡಿನಿಂದ ಎಂಡಿಎಂಎ ತರಿಸಿ ಕಾಲೇಜಿನಲ್ಲಿ ತಮ್ಮ ಆಪ್ತರಿಗೆ ಮಾರಾಟ ಮಾಡುತ್ತಿದ್ದರು.

ನಗರದಲ್ಲಿ ಕೆಲ‌ ವಿದ್ಯಾರ್ಥಿಗಳು ಆರೋಪಿಗಳಾಗಿದ್ದು ಡ್ರಗ್ ದಂಧೆಯಿಂದ ಬಂದ ಆದಾಯದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಗಿರಿನಗರ ಠಾಣಾ ಪೊಲೀಸರು 51 ಎಂಡಿಎಂಎ ಮಾತ್ರೆಗಳನ್ನ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ದಂಧೆಯ ಮೂಲದ ಕುರಿತು ತನಿಖೆ ನಡೆಸಲಾಗುತ್ತಿದೆ.

Edited By :
Kshetra Samachara

Kshetra Samachara

23/05/2022 03:19 pm

Cinque Terre

5.09 K

Cinque Terre

0

ಸಂಬಂಧಿತ ಸುದ್ದಿ