ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಆಸ್ತಿಗಾಗಿ ಕಾದಾಟ ; ಉಳುಮೆ ಮಾಡುತ್ತಿದ್ದ ಚಿಕ್ಕಪ್ಪನ ಮೇಲೆ ಪೆಟ್ರೋಲ್ ಸುರಿದು ಕೊಲೆಯತ್ನ

ದೊಡ್ಡಬಳ್ಳಾಪುರ: ಜಮೀನು ಉಳುಮೆ ಮಾಡುತ್ತಿದ್ದ ಚಿಕ್ಕಪ್ಪನ ಮೇಲೆ ಅಣ್ಣನ ಮಕ್ಕಳು ಪೆಟ್ರೋಲ್ ಸುರಿದು ಬೆಂಕಿ ಇಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಚಿಕ್ಕಪ್ಪನ ಸ್ಥಿತಿ ಚಿಂತಾಜನಕವಾಗಿದೆ.

ರಾಮಯ್ಯ(65) ಎಂಬಾತರೇ ಹಲ್ಲೆಗೊಳಗಾದವರು. ಗ್ರಾಮದಲ್ಲಿ ಚಿಕ್ಕವೆಂಕಟರಮಣಪ್ಪ, ರಾಮಯ್ಯ, ಮುನಿಯಪ್ಪ ಮೂವರು ಸಹೋದರರಿದ್ದು, ಮೂವರು ಸಹೋದರರಿಗೆ 4 ಎಕರೆ 38 ಗುಂಟೆ ಜಮೀನು ಮಂಜೂರು ಆಗಿದೆ. ಅಣ್ಣನಾದ ಚಿಕ್ಕವೆಂಕಟರಮಣಪ್ಪ ತನ್ನ ಪಾಲಿಗೆ 2 ಎಕರೆ 38 ಗುಂಟೆ ಜಮೀನು ಇಟ್ಟು ಕೊಂಡು ಇನ್ನುಳಿದ ಎರಡು ಎಕರೆ ಜಮೀನನ್ನು ಇಬ್ಬರು ತಮ್ಮಂದಿರಿಗೆ ತಲಾ ಒಂದೊಂದು ಎಕರೆ ಬಿಟ್ಟು ಕೊಟ್ಟಿದ್ದ.

ಕ್ರಮೇಣ ಚಿಕ್ಕವೆಂಕಟರಮಣಪ್ಪನ ಮಕ್ಕಳು ಆ ಎರಡು ಎಕರೆ ಸಹ ನಮ್ಮಪ್ಪನಿಗೆ ಸೇರಿಬೇಕೆಂದು ಚಿಕ್ಕಪ್ಪನೊಂದಿಗೆ ಜಗಳ ಮಾಡಿದ್ರು. ಜಮೀನು ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿದ್ದು, ತಮ್ಮ ಪಾಲಿಗೆ ಬಂದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ನಿನ್ನೆ ಸಂಜೆ ರಾಮಯ್ಯ ಟ್ರ್ಯಾಕ್ಟರ್ ನಲ್ಲಿ ತನ್ನ ಪಾಲಿನ ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ಅಣ್ಣನ ಮಗ ರಾಮಯ್ಯ, ಆತನ ಹೆಂಡತಿ ನರಸಮ್ಮ, ಮಗ ಗೋವಿಂದರಾಜು ಸಂಬಂಧಿಗಳಾದ ನಾಗೇಶ್, ದಿಲೀಪ ರಾಮಯ್ಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾರೆ. ತಡೆಯಲು ಹೋದ ರಾಮಯ್ಯನ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ, ಸುಟ್ಟಗಾಯಗಳಿಂದ ನರಳುತ್ತಿರುವ ರಾಮಯ್ಯನನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು ಅವರ ಸ್ಥಿತಿ ಚಿತಾಂಜನಕವಾಗಿದೆ.

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

Edited By :
Kshetra Samachara

Kshetra Samachara

11/05/2022 04:51 pm

Cinque Terre

4.15 K

Cinque Terre

0

ಸಂಬಂಧಿತ ಸುದ್ದಿ