ದೊಡ್ಡಬಳ್ಳಾಪುರ: ಮನೆಯ ಮುಂಭಾಗದಲ್ಲಿ ಕಟ್ಟಿ ಹಾಕಿದ್ದ ಎರಡು ಗರ್ಭಿಣಿ ಹಸುಗಳು ಮತ್ತು ಒಂದು ಗಂಡು ಕರುವನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಕಾಲೇಜ್ ಬಳಿಯ ವಿದ್ಯಾನಗರದಲ್ಲಿ ರಮೇಶ್ ಹಾಗೂ ರಮೇಶ್ ಎಂಬುವರಿಗೆ ಸೇರಿದ್ದ ಹಸುಗಳ ಕಳ್ಳತನ ಮಾಡಲಾಗಿದೆ. ರಮೇಶ್ ಮನೆಯ ಬಳಿ ಹನುಮಂತ ಸಹ ತಮ್ಮ ಗರ್ಭಿಣಿ ಹಸುವನ್ನು ಕಟ್ಟಿಹಾಕುತ್ತಿದ್ದರು. ಹುನುಮಂತ ಅವರ ಹಸುವನ್ನು ಸಹ ಕಳ್ಳರು ಕದ್ದೊಯ್ದಿದ್ದಾರೆ.
ಆಗಸ್ಟ್ 19ರ ಮಧ್ಯರಾತ್ರಿ ಘಟನೆ ನಡೆದಿದ್ದು, ಅಂದು ರಾತ್ರಿ ರಮೇಶ್ ಹಸುಗಳಿಗೆ ಮೇವು ಹಾಕಿ ಮಲಗಿದ್ದರು. ಮಧ್ಯರಾತ್ರಿ ಸಮಯದಲ್ಲಿ ಮನೆಯ ಬಳಿ ಗಲಾಟೆಯಾಗಿದ್ದು, ಗಾಂಜಾ ಹುಡುಗರ ಗಲಾಟೆ ಎಂದು ಸುಮ್ಮನೆ ಮಲಗಿದ್ದಾರೆ. ಆದರೆ ಬೆಳಗ್ಗೆ ಹಾಲು ಕರೆಯಲು ಹೋದಾಗ 8 ಹಸುಗಳಲ್ಲಿ ಮೂರು ಹಸುಗಳು ನಾಪತ್ತೆಯಾಗಿದ್ದವು. ಮಧ್ಯರಾತ್ರಿ ಬಂದಿದ್ದ ಕಳ್ಳರು ಹಸುಗಳನ್ನು ಕದ್ದೊಯ್ದಿದ್ದಾರೆ. ಆಗಸ್ಟ್ 8ರಂದು ಸಹ ಇದೇ ಏರಿಯಾದಲ್ಲಿ ಹಸುಗಳ ಕಳ್ಳತನ ಕೃತ್ಯ ನಡೆದಿದ್ದು, ಹಸುಗಳನ್ನ ಕದ್ದೊಯುತ್ತಿರವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ ನಗರದಲ್ಲಿ ಬಹುತೇಕ ಜನರು ಇವತ್ತಿಗೂ ಪಶುಸಂಗೋಪನೆಯಿಂದ ಜೀವನ ಮಾಡುತ್ತಿದ್ದಾರೆ. ಬಡವರ ಜೀವನೋಪಾಯಕ್ಕೆ ಆಧಾರವಾಗಿದ್ದ ಹಸುಗಳನ್ನ ಕದ್ಯೊಯುತ್ತಿರುವ ಹಸುಗಳ್ಳರು ಅವರ ಬದುಕನ್ನೇ ಬರ್ಬಾದ್ ಮಾಡುತ್ತಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸರು ತಕ್ಷಣವೇ ಹಸುಗಳ್ಳರನ್ನ ಸೆರೆ ಹಿಡಿದು ಪಶುಪಾಲಕರ ನೆಮ್ಮದಿ ಜೀವನಕ್ಕೆ ಸಹಕಾರಿಯಾಗ ಬೇಕಿದೆ.
PublicNext
25/08/2022 03:22 pm