ಬೆಂಗಳೂರು: ಅನುಮತಿ ಇಲ್ಲದೆ ಸಾವಿರಾರು ಜನರನ್ನು ಸೇರಿಸಿ ಇವೆಂಟ್ ನಡೆಸಿದ ಮೌಂಟ್ ಕಾರ್ಮೆಲ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹೈಗ್ರೌಂಡ್ಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸಚಿನ್ ಸುಮೊಟೊ ಕೇಸ್ ದಾಖಲಿಸಿದ್ದಾರೆ. ಕಾಲೇಜು ಕಾರ್ಯಕ್ರಮದಲ್ಲಿ ಅನುಮತಿ ಇಲ್ಲದೆ ಸುಮಾರು 8 ರಿಂದ 10 ಸಾವಿರ ಮಂದಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಆತಂಕಕಾರಿ ವಿಷಯ ಅಂದ್ರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳ ಬಳಿ ಬ್ಲೇಡ್, ಚಾಕು, ಸಿಗರೇಟ್, ಎಣ್ಣೆ ಬಾಟಲಿ ಪತ್ತೆಯಾಗಿವೆ. ಕಾರ್ಯಕ್ರಮಕ್ಕೆ ಬಂದಿದ್ದವರಿಂದ ಕಾಲೇಜು ವಿದ್ಯಾರ್ಥಿಗಳ ಮೇಲೆ ಅಟ್ಯಾಕ್ ಮಾಡಲು ಸಂಚು ರೂಪಿಸಿದ್ದರೆಂದು ತಿಳಿದು ಬಂದಿದೆ. ಅವಾಚ್ಯ ಪದಗಳಿಂದ ನಿಂದಿಸಿ ಗಲಾಟೆ ಮಾಡಲು ಯತ್ನಿಸಿರೋ ಆರೋಪ ಕೂಡ ಕೇಳಿ ಬಂದಿದೆ.
ಮೌಂಟ್ ಕಾರ್ಮಲ್ ಕಾಲೇಜಿನಿಂದ ನಡೆದಿದ್ದ ಇವೆಂಟ್‌ನಲ್ಲಿ ಪ್ರತಿ ವಿದ್ಯಾರ್ಥಿಗೆ 20 ಪಾಸ್ ನೀಡಲಾಗಿತ್ತು. ಪಾಸ್ ಅನ್ನು ಕಾಲೇಜಿನ ಕೆಲ ವಿದ್ಯಾರ್ಥಿಗಳು 100 ರೂ. ನಂತೆ ಮಾರಾಟ ಮಾಡಿದ್ದರು. ಆಗಸ್ಟ್ 15 ರಂದು ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆ ಕಾರ್ಯಕ್ರಮ ಆಯೋಜಿಸಿಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳ ಜೊತೆ ಪಾಸ್ ಪಡೆದು ಕಾಲೇಜು ಕಾರ್ಯಕ್ರಮದಲ್ಲಿ ಸಾಕಷ್ಟು ಯುವಕರು ಭಾಗಿಯಾಗಿದ್ದರು.
ಯಾವುದೇ ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜಿಸಿ ಟ್ರಾಫಿಕ್ ಜಾಮ್‌ಗೂ ಕಾರಣರಾಗಿದ್ದ ಕಾಲೇಜು ಬಳಿ ಹೈಗ್ರೌಂಡ್ ಪೊಲೀಸ್ರು ಧಾವಿಸಿ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದು ಗುಂಪು ಚದುರಿಸಿದ್ರು.
PublicNext
19/08/2022 11:05 am