ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

7 ತಿಂಗಳಿಂದ ಶವಾಗಾರಲ್ಲೇ ಇದ್ದವು 2 ಶವ: ಸಿಬ್ಬಂದಿ ಯಡವಟ್ಟು

ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಮಾಡುವ ಯಡವಟ್ಟಿನಿಂದ ಕೆಲವೊಮ್ಮೆ ದೊಡ್ಡ ಅವಾಂತರಗಳು ಆಗಿಬಿಡುತ್ತವೆ. ಆದ್ರೆ ಈ ಬಾರಿ ಶವಾಗಾರದ ಸಿಬ್ಬಂದಿಯಿಂದ ಯಡವಟ್ಟು ನಡೆದಿದೆ. ಸತತ 7 ತಿಂಗಳುಗಳಿಂದ ಶವಾಗಾರದಲ್ಲಿ ಎರಡು ಶವಗಳು ಅನಾಥವಾಗಿ ಬಿದ್ದಿವೆ. ಬೆಂಗಳುರಿನ ESI ಕೊರೊನಾ ಆಸ್ಪತ್ರೆಯ ಶವಾಗಾರದಲ್ಲಿ ಈ ಹೃದಯ ಕಲಕುವ ಘಟನೆ ನಡೆದಿದೆ.

ಕೊರೊನಾ ಎರಡನೇ ಅಲೆ ಸಮಯದಲ್ಲಿ ಆಸ್ಪತ್ರೆ ಆವರಣದಲ್ಲಿ ಹೊಸ ಶವಾಗಾರದ ಕಟ್ಟಡ ಉದ್ಘಾಟನೆಯಾಗಿದೆ. ಹೀಗಾಗಿ ಶವಾಗಾರದ ಸಿಬ್ಬಂದಿ ಈ ಎರಡು ಶವಗಳನ್ನು ಹಳೆಯ ಶವಾಗಾರದಲ್ಲೇ ಮರೆತುಬಿಟ್ಟಿದ್ದಾರೆ. ಸುಮಾರು ಏಳು ತಿಂಗಳುಗಳ ನಂತರ ಹಳೆಯ ಶವಾಗಾರವನ್ನು ಸ್ವಚ್ಛಗೊಳಿಸಲು ತೆರೆದಾಗ ಎರಡು ಶವಗಳು ಅಲ್ಲಿರುವುದು ಪತ್ತೆಯಾಗಿದೆ. ಒಬ್ಬ ಮಹಿಳೆ ಮತ್ತು ಒಬ್ಬ ವೃದ್ದನ ಶವ ಇದಾಗಿದ್ದು ಶವಗಳನ್ನುವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಲಾಗಿದೆ. ರಾಜಾಜಿನಗರ ಠಾಣೆಯಲ್ಲಿ UDR ಕೇಸ್ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

29/11/2021 01:35 pm

Cinque Terre

418

Cinque Terre

0

ಸಂಬಂಧಿತ ಸುದ್ದಿ