ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ ಬೈಕ್ ಕಳವು - ಕದ್ದ ಬೈಕ್ ಸುಟ್ಟು ಹಾಕಿದ ಕಳ್ಳ

ದೊಡ್ಡಬಳ್ಳಾಪುರ : ಮನೆ ಮುಂದೆ ನಿಲ್ಲಿಸಿದ ಬೈಕ್ ಕಳವು ಮಾಡಿದ ಕಳ್ಳ, ಗ್ರಾಮದ ಹೊರಗೆ ಕಳವು ಮಾಡಿದ ಬೈಕ್‌ಅನ್ನು ಸುಟ್ಟು ಹಾಕಿರುವ ವಿಚಿತ್ರ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಬೀರನಯ್ಯನಪಾಳ್ಯದ ಗೌಡನ ಕೆರೆ ಬಳಿ ಘಟನೆ ನಡೆದಿದೆ. ಗ್ರಾಮದ ರಮೇಶ್ ಎಂಬುವರ ಬೈಕ್‌ಅನ್ನು ಕಳುವ ಮಾಡಿರುವ ಕಳ್ಳರು, ಕದ್ದ ಬೈಕ್‌ಅನ್ನು ಗ್ರಾಮದ ಹೊರಗಿನ ಗೌಡನಕೆರೆ ಬಳಿ ಸುಟ್ಟು ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಳಿ ವ್ಯಾಪಾರ ಮಾಡುವ ರಮೇಶ್ ಓಡಾಟಕ್ಕೆಂದು ಬಜಾಜ್ ಡಿಸ್ಕವರಿ ಬೈಕ್ ಹೊಂದಿದ್ದರು. ಡಿಸೆಂಬರ್ 6ರಂದು ವ್ಯಾಪಾರ ಮುಗಿಸಿಕೊಂಡು ಬಂದಿದ್ದ ಅವರು, ಮನೆಯ ಮುಂದೆ ಬೈಕ್ ನಿಲ್ಲಿಸಿದ್ದಾರೆ. ಬೆಳಗ್ಗೆ ವ್ಯಾಪಾರಕ್ಕೆಂದು ಹೋಗಲು ಹೊರಗೆ ಬಂದಾಗ ಬೈಕ್ ನಾಪತ್ತೆಯಾಗಿದೆ. ಬೈಕ್ ಹುಡುಕಾಟ ನಡೆಸುವಾಗ ಸಂಬಂಧಿಯೊಬ್ಬರು ಕೆರೆಯ ಬಳಿ ಬೈಕ್ ಸುಟ್ಟು ಹಾಕಿರುವುದಾಗಿ ಹೇಳಿದ್ದಾರೆ.

ರಮೇಶ್ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೈಕ್ ಕಳವು ಮಾಡಿದ್ಯಾಕೆ? ಕಳವು ಮಾಡಿದ ಬೈಕ್ ಅನ್ನು ಸುಟ್ಟು ಹಾಕಿದ್ಯಾಕೆ? ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಇರುವುದು ಕೂತುಹಲಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

11/12/2024 10:04 am

Cinque Terre

252

Cinque Terre

0

ಸಂಬಂಧಿತ ಸುದ್ದಿ