ಬೆಂಗಳೂರು: ಇಷ್ಟು ದಿನ ಮಫ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಸಿಬಿ ಅಧಿಕಾರಿ ಸಿಬ್ಬಂದಿ ಇನ್ನು ಮುಂದೆ ಸಮವಸ್ತ್ರ ಧರಿಸಬೇಕು. ಆದ್ರೆ ಖಾಕಿ ಬದಲಿಗೆ ಸಿಸಿಬಿಯ ಹೊಸ ಜಾಕೆಟ್ ಗಳನ್ನ ಸಿಬ್ಬಂದಿ ಧರಿಸಬೇಕು.ಎಸಿಬಿ ಮಾದರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ವೇಳೆ ಈ ಜಾಕೆಟ್ ಧರಿಸೋದು ಕಡ್ಡಾಯ. ಇಂದು ಕಮಿಷನರ್ ಸರ್ವಿಸ್ ಪರೇಡ್ ವೇಳೆ ಸಿಸಿಬಿಯ ಹೊಸ ಸಮವಸ್ತ್ರ ಜಾಕೆಟ್ ಗಳನ್ನ ಬಿಡುಗಡೆಗೊಳಿಸಿದ್ರು.
ಸಿಸಿಬಿ ಜಂಟಿ ಆಯುಕ್ತ ರಮಣ್ ಗುಪ್ತ ಈ ಹೊಸ ನಿಯಮ ಜಾರಿಗೆ ತಂದಿದ್ದು ದಾಳಿ ಇಲ್ಲದಿದ್ದರೂ ಅಧಿಕಾರಿ ಮತ್ತು ಸಿಬ್ಬಂದಿ ಫಾರ್ಮಲ್ ಡ್ರೆಸ್ ಬಳಸುವಂತೆ ಸೂಚಿಸಿದ್ದಾರೆ.
PublicNext
11/04/2022 06:34 pm