ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಡಿಎ ಹಿಂದಿನ ಡಿಎಸ್ ಹಾಗೂ ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಗೆ ಕಂಟಕ

ವಿಶೇಷ‌ ವರದಿ - ಗಣೇಶ್ ಹೆಗಡೆ

ಬೆಂಗಳೂರು: ಬಿಡಿಎ ಕೇಂದ್ರ ಕಚೇರಿ ಮೇಲಿನ ಎಸಿಬಿ ದಾಳಿ ಬಳಿಕ ಮುಂದೇನಾಯ್ತು? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. 300 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಎಸಿಬಿ ಶಂಕೆ ವ್ಯಕ್ತಪಡಿಸಿ ದಾಖಲೆ ಗಳನ್ನು ವಶಕ್ಕೆ ಪಡೆದಿದೆ.

ಆದರೆ ದಾಳಿಯ ವೇಳೆಯ ವಿಚಾರಣೆಗೆ ಒಳಗಾದ 8 ಮಂದಿ ಕೆಎಎಸ್ ಅಧಿಕಾರಿಗಳು ಸೇಫ್ ಎಂದು ಹೇಳಲಾಗುತ್ತಿದೆ. ಬಿಡಿಎ ಪಡಸಾಲೆಯ ಕೇಳಿ ಬರ್ತಿರುವ ಪ್ರಕಾರ ಹಿಂದಿನ ವಿಶೇಷ ಭೂಸ್ವಾಧಿಕಾರಿಗಳು,ಉಪ ಕಾರ್ಯದರ್ಶಿ ಗಳಿಗೆ ಕಂಟಕ ಆಗುವ ಸಂಭವ ಇದೆ.

2013ರಿಂದ 2020 ವರಿಗೆ ನಡೆದ ಅಕ್ರಮಗಳನ್ನ ಬೇಟೆ ಯಾಡಿದ್ದ ಎಸಿಬಿ ಅಂದಿನ ಅಧಿಕಾರಿಗಳಿಗೆ ನೋಟಿಸ್ ನೀಡುವ ಸಂಭವ ಇದೆ.

ಉಪಕಾರ್ಯದರ್ಶಿಗಳು ಪಟ್ಟಿ..

KAS ಅಧಿಕಾರಿ ಮಂಗಳ, ರಾಜು, ಅನಿಲ್ ಕುಮಾರ್, ಭಾಸ್ಕರ್, ಹರೀಶ್ ನಾಯಕ್, ವೆಂಕಟರಾಜ್, ಚಿದಾನಂದ.

ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ಎಂಎಸ್ಎನ್ ಬಾಬು, ಡಾ ಸುಧಾ ಮಲ್ಲಿಕಾರ್ಜುನ್, ಮಂಜುನಾಥ್, ಮಂಗಳ, ಡಾ.ಸುಧಾ, ಮಮತ, ಉಪ ಆಯುಕ್ತರಾಗಿದ್ದ ಶಿವರಾಜ್ ಇವರ ಆಡಳಿತಾವಧಿಯಲ್ಲಿ ಅಕ್ರಮ ನಡೆದಿರೋ ಹಿನ್ನೆಲೆಯಲ್ಲಿ ಕ್ರಮಕ್ಕೆ ಎಸಿಬಿ ಮುಂದಾಗುವ ಸಂಭವ ಇದೆ.

ಬಿಡಿಎ ಮೇಲೆ ದಾಳಿ ವೇಳೆ ಎಸಿಬಿ ಬಯಲು ಮಾಡಿದ ಅಕ್ರಮಗಳ ವಿವಿರ‌........

-ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆಯ 75 ಕೋಟಿ ಬೆಲೆ ಬಾಳುವ 6 ನಿವೇಶನಗಳನ್ನ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆ ಸೃಷ್ಠಿಸಿರುವುದು ಪತ್ತೆ..

-ಕೆಂಗೇರಿ ಹೊಬಳಿಯಲ್ಲಿ ಉಲ್ಲಾಳ ಗ್ರಾಮದಲ್ಲಿ 1.5 ಕೋಟಿ ಮೌಲ್ಯದ ಅಕ್ರಮ ನಿವೇಶನಗಳು ಮಂಜೂರು

-ಸ್ಯಾಟಲೈಟ್ ಟೌನ್ ಬಳಿ 80 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು

-ಚಂದ್ರಾಲೇಔಟ್ ನಲ್ಲಿ2400 ಚದರ ಅಡಿಯ 5 ಕೋಟಿ ಮೌಲ್ಯದ ನಿವೇಶನ ಅಕ್ರಮ ಮಂಜೂರು

-ಕೋಟ್ಯಾಂತರ ಮೌಲ್ಯದ ಪರಿಹಾರ ಧನ ಸದರಿ ವ್ಯಕ್ತಿಗಳಿಗೆ ನೀಡದೆ ಬೇರೆಯವರಿಗೆ ನೀಡಿರುವುದು ಪತ್ತೆ

-ಕೆಂಪೇಗೌಡ ಲೇಔಟ್ ನಲ್ಲಿ 30 ಲಕ್ಷ ಮೌಲ್ಯದ ಅಕ್ರಮ ನಿವೇಶನ ಮಂಜೂರು

- ಒಂದು ನಿವೇಶನವನ್ನ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ನೊಂದಣಿ ಈ ಕುರಿತು ತನಿಖೆ

-ವಿಶ್ವೇಶ್ವರಯ್ಯ ಲೇಔಟ್ ನಲ್ಲಿ 52 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು

-ಅರ್ಕಾವತಿ ಲೇಔಟ್ ನಲ್ಲಿ ಪಲಾನುಭವಿಗಳಿಗಲ್ಲದೆ ಬೇರೆಯವರಿಗೆ ನಿವೇಶನ ಮಂಜೂರು ಮಾಡಿ ಅಕ್ರಮ

- ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ ಲೇಔಟ್, ಮೊದಲಾದ ಕಡೆ ಅಧಿಕಾರಿಗಳು ಮತ್ತು ಮದ್ಯವರ್ತಿಗಳೊಂದಿಗೆ ಅಕ್ರಮವಾಗಿ ಸೈಟ್ ಗಳ ಮಂಜೂರು

-ಅಂಜನಾಪುರ ಬಡಾವಣೆಯಲ್ಲಿ ಮೂಲ ಮಾಲೀಕನಿಗಲ್ಲದೆ ಬೇರೆಯವರಿಗೆ ನಿವೇಶನ ನೀಡಿರುವ ದಾಖಲೆ ಪತ್ತೆ

- ಅರ್ಕಾವತಿ ಲೇಔಟ್ ಸೇರಿದಂತೆ ಇತರೆ ಕಡೆ ಅರ್ಜಿದಾರರಿಂದ ಹಣ ಪಡೆದು ನಿವೇಶನ ನೀಡದೆ ತೊಂದರೆ ಕೊಟ್ಟಿರುವ ಅಧಿಕಾರಿಗಳು

- ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ವಿಳಂಬ ಮಾಡಿರುವು ಪತ್ತೆ

- ಭೂಸ್ವಾಧೀನ ವಿಭಾಗದಲ್ಲಿ ಒಂದೇ ಜಾಗಕ್ಕೆ ಎರಡೆರಡು ಬಾರಿ ಪರಿಹಾರ..

-ಕಾರ್ನರ್ ಸೈಟ್ ಸಿಎ ಸೈಟ್ ಗಳನ್ನ ಅಕ್ರಮ ವಾಗಿ ಹಂಚಿಕೆ

- ಸಗಟು ಸೈಟ್ ಹಂಚಿಕೆಯಲ್ಲಿ ಅಕ್ರಮ.

Edited By : Nagaraj Tulugeri
Kshetra Samachara

Kshetra Samachara

01/12/2021 01:26 pm

Cinque Terre

378

Cinque Terre

0

ಸಂಬಂಧಿತ ಸುದ್ದಿ