ಕೋವಿಡ್ ಸಂದರ್ಭ ಒಂದು ರೀತಿಯ ಎಮರ್ಜೆನ್ಸಿಯಂತಾಗಿತ್ತು. ಎಲ್ಲಾ ಕಡೆ ಲಾಕ್ ಡೌನ್ ಕೂಡ ಹೇರಲಾಗಿತ್ತು. ಆ ಸಮಯದಲ್ಲಿ ಜನರ ಕಂಟ್ರೋಲ್ ಗೆ ಪೊಲೀಸ್ರು ಜನರಿಗೆ ಲಾಠಿ ರುಚಿಯನ್ನು ತೋರಿಸಿದ್ರು. ಲಾಠಿ ಏಟು ತಿಂದ ವ್ಯಕ್ತಿಯೊಬ್ಬ ತನಗೆ ಅನ್ಯಾಯ ಆಗಿದೆ. ನ್ಯಾಯ ಬೇಕು ಎಂದು ಹ್ಯೂಮನ್ ರೈಟ್ಸ್ ಕಮೀಷನ್ ಮೆಟ್ಟಿಲೇರಿದ್ದ.
ಕಳೆದ 2 ವರ್ಷದ ಹಿಂದೆ ಎರಡನೇ ಲಾಕ್ ಡೌನ್ ಸಮಯದಲ್ಲಿ ಭಟ್ಕಳದಲ್ಲಿ ಪೊಲೀಸರ ಕೈಯಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಹಸನ್ ಇರ್ಷದ್ ಎನ್ನುವವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆ ಸದ್ಯ ಎರಡು ವರ್ಷಗಳ ಬಳಿಕ ಹ್ಯೂಮನ್ ರೈಟ್ಸ್ ಕಮೀಷನ್ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಇಲಾಖೆ ತನಿಖೆ ನಡೆಸಲು ಆದೇಶ ನೀಡಿದ್ದು, 50 ಸಾವಿರ ದಂಡ ವಿಧಿಸಿದೆ.
ಇದು 2020 ರಲ್ಲಿ ಭಟ್ಕಳದಲ್ಲಿ ನಡೆದ ಘಟನೆ.ತಾಯಿಗೆ ಹುಷಾರಿಲ್ಲ ಎಂಬ ಕಾರಣಕ್ಕೆ ಲಾಕ್ ಡೌನ್ ವೇಳೆ ಹಸನ್ ಇರ್ಷಾದ್ ಮೆಡಿಕಲ್ ಶಾಪ್ ಗೆ ಬಂದಿದ್ದರು. ಆಗಲೇ ಹಸನ್ ಇರ್ಷಾದ್ ಮೇಲೆ ಭಟ್ಕಳ ಸಬ್ ಇನ್ಸ್ಪೆಕ್ಟರ್ ಭರತ್ ಕುಮಾರ್ ಹಾಗೂ ಕಾನ್ಸ್ ಟೇಬಲ್ ಗಂಭೀರವಾಗಿ ಹಲ್ಲೆ ನಡೆಸಿದ್ರು.
ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಅವರ ಮೂಲಕ ಇದ್ರ ವಿರುದ್ಧ ಇರ್ಷಾದ್ ಮಾನವ ಹಕ್ಕು ಆಯೋಗದ ಮೊರೆ ಹೋದರು. ಇಬ್ಬರು ಅಧಿಕಾರಿಗಳ ಮೇಲೆ ಸಿಸಿಟಿವಿ ವೀಡಿಯೋ ಸೇರಿ ಹಲವು ಎವಿಡೆನ್ಸ್ ನೀಡಿ ದೂರು ನೀಡಿದ್ರು. ಮಾನವ ಹಕ್ಕು ಆಯೋಗ ಇಬ್ಬರು ಅಧಿಕಾರಿಗಳಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಿದಾಗ, ಹಲ್ಲೆ ಮಾಡಿರೋದರ ಬಗ್ಗೆ ಒಪ್ಪಿಕೊಂಡಿದ್ದರು. ಈ ಸಂಬಂಧ ಮಾನವ ಹಕ್ಕು ಆಯೋಗ ಇಬ್ಬರು ಅಧಿಕಾರಿಗಳಿಗೆ ಐವತ್ತು ಸಾವಿರ ದಂಡದ ಜೊತೆಗೆ ಇಲಾಖಾ ತನಿಖೆಗೆ ಆದೇಶ ನೀಡಿದೆ.
ಇನ್ನು ಇಲಾಖಾ ತನಿಖೆಯ ಬಳಿಕ ಪೊಲೀಸ್ ಇಲಾಖೆ ಇಬ್ಬರು ಅಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎಂಬುದು ಕಾದು ನೋಡಬೇಕಿದೆ.
PublicNext
29/06/2022 07:51 pm