ಬೆಂಗಳೂರು: ಆ ತಂದೆ ತನ್ನ ಮಗಳ ಮದುವೆಗೆ ಹತ್ತಾರು ಕನಸು ಕಂಡಿದ್ದ. ಮಗಳು ಕೂಡ ಮದುವೆ ಕುರಿತು ಬಣ್ಣ ಬಣ್ಣದ ಯೋಚನೆ ಮಾಡಿದ್ದಳು. ಅಪ್ಪ ಮಗಳಿಬ್ಬರು ಮದುವೆಗೆ ಚೌಲ್ಟ್ರಿ ಬುಕ್ ಮಾಡಿ ಖುಷಿಯಿಂದ ಮನೆಗೆ ವಾಪಸ್ ಆಗ್ತಿದ್ರು. ಆದ್ರೆ ವಿಧಿಯಾಟ ಬೇರೆಯೇ ಇತ್ತು. ಮದುವೆ ಸಡಗರದಲ್ಲಿದ್ದ ತಂದೆ-ಮಗಳು ಟ್ರಾನ್ಸ್‌ಫಾರಮ್ ಸ್ಫೋಟಕ್ಕೆ ಬಲಿಯಾಗಿದ್ದಾರೆ.
ನಿನ್ನೆ ಬುಧವಾರ ಮಂಗಮ್ಮನ ಪಾಳ್ಯದಲ್ಲಿ ವಿದ್ಯುತ್ ಟ್ರಾನ್ಸ್‌ಫಾರಮ್ ಬ್ಲಾಸ್ಟ್ ಆಗಿದ್ದು, ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ತಂದೆ ಮಗಳಿಗೆ ಬೆಂಕಿ ತಗುಲಿತ್ತು. ಗಂಭೀರಗಾಯಗಳಾಗಿದ್ದ ತಂದೆ ಶಿವರಾಜ್ ಮತ್ತು ಮಗಳು ಚೈತನ್ಯ ಆಸ್ಪತ್ರೆಗೆ ಸೇರಿದ್ರು. ಆದ್ರೆ ಚಿಕಿತ್ಸೆ ಫಲಕಾರಿ ಆಗದೇ ತಂದೆ ಮಗಳಿಬ್ಬರು ದಾರುಣ ಸಾವು ಕಂಡಿದ್ದಾರೆ.
ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಉಳ್ಳಾಲದಲ್ಲಿ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ಆಗಿದ್ದು ಈ ಕುರಿತು ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ದುರಂತಕ್ಕೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಸರಿಯಾದ ನಿರ್ವಹಣೆ ಮಾಡಿದ್ರೆ ಈ ದುರಂತ ನಡೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ಬೆಸ್ಕಾಂಗೆ ಹಿಡಿ ಶಾಪ ಹಾಕಿದ್ದಾರೆ.
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
24/03/2022 09:19 am