ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೋಡ್ ರೋಲರ್ ಆಪರೇಟರ್ ಅಜಾಗರೂಕತೆ: ಲಾರಿ ಕ್ಲೀನರ್ ಸಾವು

ನೆಲಮಂಗಲ: ಖಾಸಗಿ ಕಂಪನಿಯ ಲಾರಿಯಲ್ಲಿದ್ದ ನೂತನ ರೋಡ್ ರೋಲರ್ ಅನ್ಲೋಡ್ ವೇಳೆ ಆಪರೇಟರ್‌ನ ಅಜಾಗರೂಕತೆಗೆ ಲಾರಿಯಲ್ಲಿದ್ದ ಕ್ಲೀನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲ್ಲೂಕು ಬೂದಿಹಾಳ್ ಸಮೀಪದ ಖಾಸಗಿ ಕಂಪನಿಯಲ್ಲಿ ನೆಡೆದಿದೆ.

ಇನ್ನೂ ಮೈಸೂರು ಮೂಲದ 46 ವರ್ಷ ವಯಸ್ಸಿನ ರವಿ ಎಂಬಾತರೇ ಮೃತ ದುರ್ದೈವಿ. ಇವರು ಕಾಟನ್ ಪೇಟೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಕಂಪನಿಯಲ್ಲಿ ಲಾರಿಯಿಂದ ಪಿಟಿ ರೋಲರ್‌ಅನ್ನು ಕೆಳಗಿಳಿಸುವ ಸಂದರ್ಭದಲ್ಲಿ ಕಾಳಿದೇವ್ ಎಂಬ ಆಪರೇಟರ್‌ನ ಅಜಾಗರೂಕತೆಗೆ ಲಾರಿ ಕ್ಲೀನರ್ ರವಿ ಮೃತಪಟ್ಟಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ರೋಲರ್ ಆಪರೇಟರ್ ಕಾಳಿದೇವ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

04/08/2022 10:26 pm

Cinque Terre

36.04 K

Cinque Terre

0

ಸಂಬಂಧಿತ ಸುದ್ದಿ