ಬೆಂಗಳೂರು: ಪುನೀತ್ ರಾಜ್ ಕುಮಾರ್ ನೇತ್ರದಾನ ಮಾಡುವ ಮೂಲಕ ಸಾವಿರಾರು ಜನರಿಗೆ ಪ್ರೇರಣೆಯಾಗಿದ್ದಾರೆ. ಅವರನ್ನು 'ನಮ್ಮ ದೃಷ್ಟಿ... ನಮ್ಮ ಕರ್ನಾಟಕ' ಅರಿವು ಅಭಿಯಾನದ ರಾಯಭಾರಿ ಮಾಡಿರುವುದು ಅತ್ಯಂತ ಸೂಕ್ತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ.ರಾಜ್ ಕುಮಾರ್ ಟ್ರಸ್ಟ್ & ಎಸ್ಸಿಲಾರ್ ವಿಷನ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ 'ನಮ್ಮ ದೃಷ್ಟಿ... ನಮ್ಮ ಕರ್ನಾಟಕ' ಅರಿವು ಅಭಿಯಾನ ಉದ್ಘಾಟಿಸಿ ಮಾತನಾಡಿದರು.
* ಬಾಹ್ಯ & ಆಂತರಿಕ ದೃಷ್ಟಿ: ಪ್ರತಿ ಬಾರಿ ಪುನೀತ್ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗಲೂ ಹೊಸ ಸ್ಫೂರ್ತಿ ದೊರೆಯುತ್ತದೆ. ವ್ಯಕ್ತಿ ಸಾಧನೆ ಮಾಡಲು ಬಹಳ ವರ್ಷ ಕಾಯಬೇಕಿಲ್ಲ. ಆತ್ಮಶುದ್ದಿ ಇದ್ದಲ್ಲಿ ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಪುನೀತ್ ನಿರೂಪಿಸಿದ್ದಾರೆ ಎಂದರು.
* ಡಾ. ರಾಜ್‍ಕುಮಾರ್ ಅತ್ಯುತ್ತಮ ವ್ಯಕ್ತಿ:
ಡಾ. ರಾಜ್‍ಕುಮಾರ್ ಮೇರು ನಟ. ಆದರೆ, ಅತ್ಯುತ್ತಮ ವ್ಯಕ್ತಿಯೂ ಆಗಿದ್ದರು. ಅವರಲ್ಲಿದ್ದ ಉದಾತ್ತತೆ, ದಯೆ ಅಳತೆ ಮಾಡದಷ್ಟು ದೊಡ್ಡದಾಗಿತ್ತು. ಡಾ.ರಾಜ್ ಕುಮಾರ್ & ಪುನೀತ್ ರಾಜ್ ಕುಮಾರ್ ದೇವರ ಕೊಡುಗೆ. ಅಂತಹ ವ್ಯಕ್ತಿಗಳು ಮತ್ತೊಮ್ಮೆ ಸಿಗುವುದಿಲ್ಲ ಎಂದು ಸಿಎಂ ಸ್ಮರಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ನಟ ರಾಘವೇಂದ್ರ ರಾಜ್ ಕುಮಾರ್, ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮತ್ತಿತರರು ಉಪಸ್ಥಿತರಿದ್ದರು.
- SureshBabu 'Public Next' ಬೆಂಗಳೂರು
PublicNext
29/03/2022 11:12 pm