ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳೆಲ್ಲ ನೀರು ತುಂಬಿ ಹರಿದಿದೆ.ಹಲವು ಮನೆ ಮತ್ತು ಅಂಗಡಿಯಲ್ಲಿ ನೀರು ನುಗ್ಗಿ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು.
ಭಾರಿ ಮಳೆಗೆ ವಾಹನ ಸವಾರರು ಪರದಾಡಿದ್ದಾರೆ. ದಾಸರಹಳ್ಳಿ, ಹೇರೋಹಳ್ಳಿ,ಜ್ಞಾನ ಭಾರತಿ ಮೊದಲಾದ ಕಡೆಗಳಲ್ಲಿ ಸಿಕ್ಕಾಪಟ್ಟೆ ಮಳೆ ಸುರಿದಿದೆ. ಎರಡೇ ಎರಡು ದಿನ ಬಿಡುವು ಕೊಟ್ಟ ವರುಣ, ಗುಡುಗು ಮಿಂಚು ಸಹಿತ ನಿನ್ನೆ ಸುರಿದಿದ್ದಾನೆ.
Kshetra Samachara
23/10/2021 07:31 am