ಹಿರಿಯ ನಟ ರಾಮ್‌ಕುಮಾರ್ ಅವರ ಪುತ್ರ ಧೀರೆನ್ ರಾಮ್‌ಕುಮಾರ್ ಅವರ 'ಶಿವ 143' ಚಿತ್ರ ನಾಳೆ ಆಗಸ್ಟ್ 26ರಂದು ಬಿಡುಗಡೆ ಆಗುತ್ತಿದೆ. ರಾಜ್ ಕುಟುಂಬದ ಕುಡಿಯ ಮೊದಲ ಸಿನಿಮಾ ಇದಾಗದ್ದರಿಂದ ಕತೆ ಮತ್ತು ಕಥಾ ನಿರೂಪಣೆ ಮೇಲೆ ಸಾಮಾನ್ಯ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಧೀರೆನ್‌ಗೆ ಇದು ಮೊದಲ ಸಿನಿಮಾ ಆಗಿದ್ದರಿಂದ ಹೀರೋನನ್ನು ನಿರ್ದೇಶಕ ತೆರೆ ಮೇಲೆ ಹೇಗೆ ಕಾಣಿಸಿದ್ದಾರೆ? ಅವರ ನಟನೆ, ಡ್ಯಾನ್ಸ್, ಸ್ಟಂಟ್ ಇದೆಲ್ಲವೂ ಹೇಗಿದೆ ಅನ್ನೋದು ಕೂಡ ಪ್ರೇಕ್ಷಕರ ಕುತೂಹಲ. ಜೊತೆಗೆ ಹಾಸ್ಯ ದಿಗ್ಗಜರಾದ ನಟ ಸಾಧುಕೋಕಿಲ ಹಾಗೂ ಚಿಕ್ಕಣ್ಣ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಚಿತ್ರ ಸವಿರುಚಿಯ ರಸದದೌತಣ ಆಗುವ ನಿರೀಕ್ಷೆ ಇದೆ. ಚಿತ್ರದ ಬಿಡುಗಡೆಯ ಹೊಸ್ತಿಲಲ್ಲಿ ನಿರ್ದೇಶಕ ಅನಿಲ್‌ಕುಮಾರ್ ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ್ದಾರೆ. ಬನ್ನಿ ಅವರ ಮಾತುಗಳನ್ನು ಕೇಳೋಣ, ನೋಡೋಣ.
PublicNext
25/08/2022 08:19 pm