ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಾವ್ರ ಹುಟ್ಟು ಹಬ್ಬ : ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಬೆಂಗಳೂರು: ನಾಳೆ ಏ.24 ವರನಟ, ಕೆಂಟಕಿ ಕರ್ನಲ್ ಪ್ರಶಸ್ತಿ ವಿಜೇತ ಡಾ.ರಾಜ್ ಕುಮಾರ್ 94ನೇ ಹುಟ್ಟು ಹಬ್ಬಕ್ಕೆ ವಿಶೇಷ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಒಂದು ದಿನ ಮುಂಚಿತವಾಗಿ ಅಭಿಮಾನಿಗಳು ವಿಶೇಷ ಕಾರ್ಯ ಮಾಡ್ತಿದ್ದಾರೆ.

ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಂದ ಬಡ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿಸುವ ಮೂಲಕ ರಾಜ್ ಹುಟ್ಟು ಹಬ್ಬಕ್ಕೆ ಚಾಲನೆ ನೀಡಿದ್ದಾರೆ. ಇಂದು ಸದಾಶಿವ ನಗರದ ಪುನೀತ್ ನಿವಾಸದಲ್ಲಿ ಸಾಮಾಜಿಕ ಕಳಕಳಿ ಕಾರ್ಯಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದ್ರು.

ಭಾರತಿನಗರ ಸಿಟಿಜನ್ ಫೋರಂ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ವೇಳೆ ನೂರಾರು ಮಕ್ಕಳಿಗೆ ಅಶ್ವಿನಿ ಪುಸ್ತಕದ ಜೊತೆಗೆ ಸಿಹಿ ಹಂಚಿ ಅಣ್ಣಾವ್ರ ಬರ್ತಡೇ ಆಚರಿಸಿದರು.

Edited By :
Kshetra Samachara

Kshetra Samachara

23/04/2022 05:24 pm

Cinque Terre

3.13 K

Cinque Terre

0

ಸಂಬಂಧಿತ ಸುದ್ದಿ