ವರದಿ: ಬಲರಾಮ್ ವಿ
ಬೆಂಗಳೂರು: ಮಹದೇವಪುರದ ಕ್ಷೇತ್ರದ ವೈಟ್‌ಫೀಲ್ಡ್‌ನ ಫೋರಂ ನೈಬರ್‌ಹುಡ್ ಮಾಲ್‌ನಲ್ಲಿ ನೂತನ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಅನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.
ಇಲ್ಲಿ ಒಂದೇ ಬಾರಿಗೆ 50 ವಿದ್ಯುತ್ ಚಾಲಿತ ಕಾರುಗಳನ್ನು ಚಾರ್ಚ್ ಮಾಡುವ ವ್ಯವಸ್ಥೆ ಇದ್ದು, ಇದು ದಕ್ಷಿಣ ಭಾರತದ ಅತಿದೊಡ್ಡ ವಿದ್ಯುತ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಪರಿಸರ ರಕ್ಷಣೆಯ ಆಶಯಕ್ಕೆ ಪೂರಕವಾಗಿರಲಿದೆ.
ಫಾರ್ಟಮ್ ಚಾರ್ಜ್ ಆಂಡ್ ಡ್ರೈವ್ ಇಂಡಿಯಾ ಕಂಪನಿಯ ಮುಖ್ಯಸ್ಥರಾದ ಅವದೇಶ್ ಜಾ, ಫೋರಂ ವ್ಯಾಲ್ಯೂ ಮಾಲ್ ವ್ಯವಸ್ಥಾಪಕರಾದ ಅನಂತ್, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
PublicNext
06/05/2022 10:33 pm