ಬೆಂಗಳೂರು : ಕರ್ನಾಟಕ ಸಾಬೂನು ಮತ್ತು ಮಾಜಕ ನಿಯಮಿತ ಇತಿಹಾಸದಲ್ಲೇ ಇದೆ ಮೊಟ್ಟಮೊದಲ ಬಾರಿಗೆ ಕೋಟ್ಯಾಂತರ ರೂಪಾಯಿ ಅಧಿಕ ಮಾರಾಟ ವಹಿವಾಟು ನಡೆಸಿದೆ. ಸಂಸ್ಥೆಯ ಇತಿಹಾಸದಲ್ಲಿ ಉತ್ತಮ ಮೈಲುಗಲ್ಲು ಸಾಧಿಸಿದೆ. 2024 ಮಾರ್ಚ್ ಅಂತ್ಯಕ್ಕೆ ಗರಿಷ್ಠ ರೂಪಾಯಿ 1570 ಕೋಟಿ ವಹಿವಾಟು ನಡೆಸಿದೆ.
ಅಷ್ಟೇ ಅಲ್ಲದೆ ಇನ್ನಷ್ಟು ಹೊಸ ಮೈಲಿಗಲ್ಲನ್ನು ಸಾಧಿಸುವ ಯೋಚನೆಯಲ್ಲಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಇಂದು ಬೆಂಗಳೂರಿನ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸಾಬೂನು ಮತ್ತು ಮಾಚಕ ನಿಯಮಿತ ಅಧ್ಯಕ್ಷ ಅಪ್ಪಾಜಿ ಸಿ ಎಸ್ ನಾಡಗೌಡ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಪಿಕೆಎಂ ಅವರು ಮಾತನಾಡಿ ಸಂಸ್ಥೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
PublicNext
07/12/2024 06:57 pm