ಬೆಂಗಳೂರು: ನಂದಿನಿ ಹಾಲಿಗೆ ರಾಷ್ಟ್ರದ ರಾಜಧಾನಿ ದೆಹಲಿಯ ಜನರು ನೂರಕ್ಕೆ ನೂರು ಅಂಕ ಕೊಟ್ಟಿದ್ದಾರೆ ಎಂದು
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದೆಹಲಿಯಲ್ಲಿ ಸದ್ಯಕ್ಕೆ 11 ಸಾವಿರ ಲೀಟರ್ ಹಾಲು ವ್ಯಾಪಾರ ಆಗುತ್ತಿದೆ. ಒಂದು ತಿಂಗಳಲ್ಲಿ ಒಂದು ಲಕ್ಷ ಲೀಟರ್ ಗುರಿ ಹೊಂದಿದ್ದೇವೆ ಎಂದರು.
ನವೆಂಬರ್ 21ರಂದು ಸಿಎಂ ಸಿದ್ದರಾಮಯ್ಯ, ದೆಹಲಿಯಲ್ಲಿ ನಂದಿನಿ ಹಾಲು ಮಾರಾಟಕ್ಕೆ ಚಾಲನೆ ನೀಡಿದ್ದರು. ದೆಹಲಿಯ ಗ್ರಾಹಕರು ನಮ್ಮ ನಂದಿನಿ ಹಾಲಿಗೆ ನೂರಕ್ಕೆ ನೂರು ಮಾರ್ಕ್ಸ್ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಾಲ್ಕರಿಂದ ಐದು ಲಕ್ಷ ಲೀಟರ್ ವ್ಯಾಪಾರ ಆಗಬೇಕು, ಆ ಕೆಲಸ ಮಾಡುತ್ತೇವೆ. ಬೇರೆ ಕಂಪನಿಗಳ ಬಗ್ಗೆ ನಾವು ಮಾತಾಡಲ್ಲ. ಅಲ್ಲಿ ಎರಡು ಬ್ರ್ಯಾಂಡ್ ನ ಹಾಲು ಮಾರ್ಕೆಟ್ ಇದೆ. ಎಮ್ಮೆ ಹಾಲನ್ನೂ ಮಾರಾಟ ಮಾಡುತ್ತಿದ್ದಾರೆ. ನಮ್ಮ ಬ್ರ್ಯಾಂಡ್ ಗೆ ದೆಹಲಿ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲಿ ಎಮ್ಮೆ ಹಾಲಿಗೆ ಹೆಚ್ಚು ಬೇಡಿಕೆ ಇದೆ ಎಂದರು.
PublicNext
04/12/2024 07:08 pm