ಬೆಂಗಳೂರು: ನಗರದ ಗೊರಗುಂಟೆಪಾಳ್ಯದ ಕಂಠೀರವ ಸ್ಟುಡಿಯೋ ಬಳಿ ಇರುವ ಬ್ರಿಡ್ಜ್ ಸಮಸ್ಯೆ ಕಳೆದ 4 ವರ್ಷಗಳಿಂದ ಇದೆ.ಈ ಬ್ರಿಡ್ಜ್ ಕಡೆ ಯಾವ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಜನರು ಕೆಂಡಾಮಂಡಲಗೊಂಡಿದ್ದಾರೆ.ಬೆಂಗಳೂರಿನ ಹಲವು ಭಾಗಗಳಲ್ಲಿ ಸ್ಮಾರ್ಟ್ ಸಿಟಿಯ ಕೆಲಸ ಕಾರ್ಯಗಳು ನಡೆಯುತ್ತಿವೆ. ಪಾದಾಚಾರಿ ರಸ್ತೆ, ವೈಟ್ ಟ್ಯಾಪಿಂಗ್ ರೋಡ್ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನ ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿದೆ. ಆದ್ರೆ, ಕಳೆದ 4 ವರ್ಷದಿಂದಲೂ ಪ್ಲೈ ಓವರ್ ಸಮಸ್ಯೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ನಿತ್ಯ ಲಕ್ಷಾಂತರ ಜನ ಭೇಟಿ ನೀಡುವ ಪ್ರದೇಶಗಳಲ್ಲಿ ವರ್ಷಗಳು ಕಳೆದ್ರೂ ಅಭಿವೃದ್ಧಿ ಕಾಮಗಾರಿ ಮಾತ್ರ ಕುಂಟುತ್ತಾ ಸಾಗುತ್ತಿದೆ.
ಕಾಮಗಾರಿಯನ್ನ ಆದಷ್ಟು ಬೇಗ ಮುಗಿಸೋದಾಗಿ ನಾಲ್ಕೈದು ಬಾರಿ ಡೆಡ್ ಲೈನ್ ನೀಡಿ ಸ್ಮಾರ್ಟ್ ಸಿಟಿ ಸುಮ್ಮನಾಗಿದೆ ಎಂದು ಜನಾಕ್ರೋಶ ಹೊರಹಾಕುತ್ತಿದ್ದಾರೆ.ಇತ್ತ ಕಂಠೀರವ ಸ್ಟುಡಿಯೋಗೆ ಲಕ್ಷಾಂತರ ಜನ ದಿನ ನಿತ್ಯ ಬರುತ್ತಾರೆ. ಆದ್ರೆ ಅವರು ಮಾತ್ರ ನಿತ್ಯ ಜೀವ ಪಣಕಿಟ್ಟು ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ.ಇಲ್ಲಿನ ವ್ಯಾಪಾರಿಗಳ ಗೊಳ್ಳಾಂತು ಹೇಳತೀರದಾಗಿದೆ.
Kshetra Samachara
05/10/2022 03:08 pm