ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಲಯನ್ಸ್ ಯುನಿವರ್ಸಿಟಿ ಹೈಡ್ರಾಮ ಪ್ರಕರಣ: ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ!

ಆನೇಕಲ್: ಅಲಯನ್ಸ್ ಯೂನಿವರ್ಸಿಟಿ ಹೈಡ್ರಾಮ ಪ್ರಕರಣ ಸಂಬಂಧಿಸಿದಂತೆ ಆನೇಕಲ್ ಪೊಲೀಸರಿಂದ ಆರೋಪಿ ಸ್ವರ್ಣಲತಾಗಾಗಿ ತೀವ್ರ ಶೋಧ ನಡೆಸಲಾಗುತ್ತದೆ. ಪ್ರಕರಣದ ಪ್ರಮುಖ ಆರೋಪಿ ಚಲನಚಿತ್ರ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಹಾಗೂ ಆರೋಪಿಗಳ ಪತ್ತೆಗಾಗಿ ಮೂರು ಪ್ರತ್ಯೇಕ ತಂಡಗಳ ರಚನೆ ಮಾಡಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.

ಅಲಯನ್ಸ್ ಯೂನಿವರ್ಸಿಟಿ ಅಕ್ರಮ ಪ್ರವೇಶ ಪ್ರಕರಣದ ಅರೋಪಿಗಳ ವಿರುದ್ದ ಐಪಿಸಿ 1860 ಸೆಕ್ಷನ್ 143, 144, 147, 148, 447, 448, 323, 504, 506, 149 ಅಡಿ ಪ್ರಕರಣ ದಾಖಲು ಮಾಡಿಲಾಗಿದೆ. ಅಲ್ಲದೇ ಇಂಡಿಯನ್ ಆರ್ಮ್ಸ್ ಆಕ್ಟ್ 1956 ಅಡಿಯಲ್ಲು ಕೇಸ್ ಬುಕ್ ಮಾಡಲಾಗಿದೆ .ಪ್ರಕರಣ ದಾಖಲಾಗಿ ಆರು ದಿನ ಕಳೆದರು ಸಹ ಸ್ವರ್ಣಲತಾ ಪತ್ತೆಯಾಗಿಲ್ಲ ಇದೇ ತಿಂಗಳು 10 ನೇ ತಾರೀಖು ಅಲಯನ್ಸ್ ಯೂನಿವರ್ಸಿಟಿಯಲ್ಲಿ ರಂಪಾಟ ಮಾಡಿದ್ದ ಸ್ವರ್ಣಲತಾ ನಾನೇ ನೆಕ್ಸ್ಟ್ ಪ್ರೋ ಚಾನ್ಸಲರ್ ಎಂದು ಅವಾಜ್ ಹಾಕಿದ್ದ ಸ್ವರ್ಣಲತಾ ಇದೀಗ ಜೈಲುವಾಸದ ಭೀತಿಯಲ್ಲಿ ನಾಪತ್ತೆಯಾಗಿದ್ದು ಬೆಂಗಳೂರು ಸೇರಿದಂತೆ ಹಲವು ಕಡೆ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.

ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್, ಬೆಂಗಳೂರು

Edited By : Somashekar
PublicNext

PublicNext

16/09/2022 08:20 pm

Cinque Terre

33.07 K

Cinque Terre

0

ಸಂಬಂಧಿತ ಸುದ್ದಿ