ಬೆಂಗಳೂರು: ಈ ಆ್ಯಪ್‌ಗಳಿಂದ ಆಟೋ ಚಾಲಕರಿಗೆ ಏನೂ ಒಳಿತಾಗ್ತಿಲ್ಲ. ಡ್ರೈವರ್ ಗಳಿಗೆ ನಿಗದಿ ಪಡಿಸಿರೋ ಮೊತ್ತ ಮಾತ್ರ ನೀಡಲಾಗ್ತಿದೆ. ಉಳಿದ ಹಣವನ್ನು ಅಗ್ರಿಗೇಟರ್‌ಗಳು ತಿಂದು ಹಾಕ್ತಿದ್ದಾರೆ ಎಂದು ಆಟೋ ಚಾಲಕರ ಒಕ್ಕೂಟ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ.
ಅವರು ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.28ರಿಂದ 30 ರೂಪಾಯಿಗೆ ಮಿನಿಮಂ ಏರಿಸುವಂತೆ 2 ವರ್ಷ ಪರದಾಡಿದ್ದೇವೆ. ಆದ್ರೆ, ಈ ಕಂಪನಿಗಳು ಕಳೆದ ಐದಾರು ವರ್ಷಗಳಿಂದ ಲೂಟಿ ಮಾಡ್ತಿವೆ. ಈ ಆ್ಯಪ್‌ಗಳನ್ನು ಸರ್ಕಾರ ಬ್ಯಾನ್ ಮಾಡಬೇಕು. ಸರ್ಕಾರವೇ ಹೊಸ ರೀತಿಯ ಆ್ಯಪ್ ಆರಂಭಿಸಬೇಕು.
ಇಂದಿನಿಂದ 7 ದಿನಗಳ ಕಾಲ ಗಡುವು ಕೊಡುತ್ತೇವೆ. ಆ್ಯಪ್ ಬ್ಯಾನ್ ಆಗದೇ ಇದ್ದಲ್ಲಿ ಸಾರಿಗೆ ಮಂತ್ರಿ ಮನೆಗೆ ಮುತ್ತಿಗೆ ಹಾಕ್ತೇವೆ ಎಂದವರು ಎಚ್ಚರಿಕೆ ನೀಡಿದ್ದಾರೆ.
PublicNext
11/10/2022 04:10 pm