ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪುನೀತ್ ರಾಜ್‌ಕುಮಾರ್‌ ರೋಲ್ ಮಾಡೆಲ್; ಇನ್ನೊಬ್ಬರ ಬಾಳಿಗೆ ಬೆಳಕಾದ ಕಿರಣ್

ಆನೇಕಲ್: ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ ತನ್ನ ಎರಡು ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಿದ್ದಾನೆ.

ಜಿಗಣಿ ಮೂಲದ ಕಿರಣ್ ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ. ಇಂದು ಮುಂಜಾನೆ ಕಿರಣ್ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟಿದ್ದ. ನಂತರ ಕಣ್ಣುಗಳನ್ನು ಕುಟುಂಬಸ್ಥರು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಇನ್ನು ಕಿರಣ್ ಅತ್ತೆ ನಿರ್ಮಲಾ ಪುನೀತ್ ರಾಜ್‌ಕುಮಾರ್ ನಮಗೆ ರೋಲ್ ಮಾಡೆಲ್. ಅವರು ಸಹ ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ. ನಮ್ಮ ಹುಡುಗನ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ ಎಂದರು. ಇನ್ನು ನೇತ್ರದಾನ ಕಾಯಕದಲ್ಲಿ ವೈ.ಕೆ ಆಸ್ಪತ್ರೆ ಡಾಕ್ಟರ್ ಜಿ.ಕೆ ನಾರಾಯಣ್ ಅಮರ್ ನಾಥ್ ರೆಡ್ಡಿ, ಅಂಜಾರೆಡ್ಡಿ ಎಂ ಸಿ ರಾಜಪ್ಪ, ಹೊಸಬೆಳಕು ಟ್ರಸ್ಟ್ ನ ರಾಮಕೃಷ್ಣ ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

07/10/2022 09:28 pm

Cinque Terre

2.09 K

Cinque Terre

0

ಸಂಬಂಧಿತ ಸುದ್ದಿ